ಪಹಲ್ಗಾಂ: ಉಗ್ರರೊಂದಿಗಿನ ಪಾಕಿಸ್ತಾನದ ನಂಟು ಒಪ್ಪಿಕೊಂಡ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ

ಇಸ್ಲಮಾಬಾದ್: ಉಗ್ರರ ಗುಂಪುಗಳೊಂದಿಗಿನ ಸಂಬಂಧಕ್ಕೆ ಪಾಕಿಸ್ತಾನಕ್ಕೆ ಹಳೆಯ ಇತಿಹಾಸವಿದೆ. ನಮಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಇದ್ದ ನಂಟು ರಹಸ್ಯವೇನಲ್ಲ. ಇದರ ಪರಿಣಾಮವಾಗಿ ನಾವು ಬಳಲಿದ್ದೇವೆ. ಪಾಕಿಸ್ತಾನ​ ಉಗ್ರರಿಂದ ಬಳಲಿದೆ. ನಾವು ಕೂಡ ಭಯೋತ್ಪಾದನೆಯನ್ನು ಎದುರಿಸಿದ್ದೇವೆ. ಸಮಸ್ಯೆಯನ್ನು ಎದುರಿಸಲು ಆಂತರಿಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಹಾಗೇ, ಈ ಹಿಂದೆ ನಮಗೂ ಉಗ್ರರಿಗೂ ಸಂಬಂಧವಿದ್ದಿದ್ದು ನಿಜ. ಆದರೆ, ಈಗ ನಾವು ಉಗ್ರರ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಉಗ್ರರೊಂದಿಗಿನ ಪಾಕಿಸ್ತಾನದ ನಂಟು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಭಾರತದಲ್ಲಿನ ಪಹಲ್ಗಾಮ್ ದಾಳಿಯ ಬಗ್ಗೆ ಪಾರದರ್ಶನ ತನಿಖೆಗೆ ಸಿದ್ಧ ಎಂದು ಹೇಳಿಕೆ ನೀಡುವ ಮೂಲಕ ಈ ದಾಳಿಗೂ ತನಗೂ ಸಂಬಂಧವಿಲ್ಲವೆಂದು ಪಾಕಿಸ್ತಾನ ಬಿಂಬಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ, ಅವರದೇ ದೇಶದ ರಕ್ಷಣಾ ಸಚಿವರು ಉಗ್ರರೊಂದಿಗೆ ಪಾಕಿಸ್ತಾನಕ್ಕೆ ಸಂಬಂಧವಿದೆ ಎನ್ನುವ ಮೂಲಕ ಅಸಲಿ ಸತ್ಯವನ್ನು ಹೊರಹಾಕಿದ್ದರು. ಅದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಪಾಕಿಸ್ತಾನವು ಹಿಂದೆ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸಿದೆ ಮತ್ತು ಅವರಿಗೆ ಹಣಕಾಸು ಒದಗಿಸಿದೆ ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡ ಕೆಲವು ದಿನಗಳ ನಂತರ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಭಯೋತ್ಪಾದಕ ಗುಂಪುಗಳೊಂದಿಗೆ ದೇಶದ ಸಂಪರ್ಕದ ಕುರಿತು ಹಿಂದಿನ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳೊಂದಿಗೆ ಹಿಂದಿನ ಸಂಪರ್ಕಗಳಿಂದಾಗಿ ತೊಂದರೆ ಅನುಭವಿಸಿದೆ ಎಂದು ಹೇಳಿದ್ದಾರೆ. ಗುರುವಾರ ಮಿರ್‌ಪುರ್ ಖಾಸ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ, ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ. ಆದರೆ ಭಾರತದಿಂದ ಪ್ರಚೋದನೆಗೆ ಒಳಗಾದರೆ ಪ್ರತಿಕ್ರಿಯಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

‘ಪಾಕಿಸ್ತಾನ ಶಾಂತಿಯುತ ದೇಶ. ಇಸ್ಲಾಂ ಶಾಂತಿಯುತ ಧರ್ಮ. ನಮಗೆ ಯುದ್ಧ ಬೇಡ, ಆದರೆ ಯಾರಾದರೂ ನಮ್ಮ ಸಿಂಧು ಮೇಲೆ ದಾಳಿ ಮಾಡಿದರೆ ಅವರು ಯುದ್ಧಕ್ಕೆ ಸಿದ್ಧರಾಗಿರಬೇಕು. ನಾವು ಯುದ್ಧದ ಡ್ರಮ್ ಬಾರಿಸುವುದಿಲ್ಲ. ಆದರೆ ಪ್ರಚೋದಿಸಿದರೆ ಅಖಂಡ ಪಾಕಿಸ್ತಾನದ ಘರ್ಜನೆ ಅವರನ್ನು ಕಿವುಡಾಗಿಸುತ್ತದೆ” ಎಂದು ಅವರು ರ್ಯಾಲಿಯಲ್ಲಿ ಹೇಳಿದ್ದಾರೆ.

error: Content is protected !!