ಶಗುಫ್ತಾ ಅಂಜುಮ್ 625ಕ್ಕೆ-625 ಅಂಕ

ಉತ್ತರಕನ್ನಡ : 2024-25ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಶಿ ತಾಲೂಕಿನ ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ 625ಕ್ಕೆ-625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಎಸೆಸೆಲ್ಸಿ ಫಲಿತಾಂಶ : ಶಿರಶಿಯ ಶಗುಫ್ತಾ ಅಂಜುಮ್‌ಗೆ 625 ಅಂಕ

ಮಂಝರುಲ್ ಇಸ್ಲಾಂ ಮತ್ತು ಸಾಹಿರಾ ಬಾನು ದಂಪತಿಯ ಪುತ್ರಿಯಾಗಿರುವ ಶಗುಫ್ತಾ ಅಂಜುಮ್ ಪ್ರತಿಭಾವಂತ ವಿದ್ಯಾರ್ಥಿನಿ. ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ.

error: Content is protected !!