ಜನಪ್ರಿಯ ಸೋಷಿಯಲ್ ಮೀಡಿಯಂ ಫ್ಲ್ಯಾಟ್‌ಫಾರ್ಮ್ ‘ಇನ್‌ಸ್ಟಾಗ್ರಾಮ್’ನಲ್ಲಿ ತನ್ನ ಫಾಲೋವರ್‌ಗಳ ಸಂಖ್ಯೆ ಕುಸಿದಿದೆ ಎಂಬ ದುಃಖದಿಂದ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಮಿಶಾ ಅಗರ್ವಾಲ್(25) ಎಂಬಾಕೆ ಆ*ತ್ಮಹ*ತ್ಯೆಮಾಡಿಕೊಂಡ ಘಟನೆ ನಡೆದಿದ್ದು, ಖ್ಯಾಥ ಬಾಲಿವುಡ್ ನಟಿ ತಾಪ್ಸಿ ಪನ್ನು ಆತಂಕ ವ್ಯಕ್ತಪಡಿಸಿದ್ದಾರೆ. ‘ಇದು ನಿಜಕ್ಕೂ ಆತಂಕ ತರುವ ವಿಚಾರʼ ಎಂದು ಅಭಿಪ್ರಾಯಿಸಿದ್ದಾರೆ.
ಮಿಶಾ ಅಗರ್ವಾಲ್ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ, ವಿಡಿಯೋ ಮಾಡುವುದನ್ನೇ ವೃತ್ತಿಯಾಗಿ ಪರಿಗಣಿಸಿ ಹಣ ಗಳಿಸುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ (10 ಲಕ್ಷ) ಅನುಯಾಯಿಗಳನ್ನು ಪಡೆಯಬೇಕು ಎಂಬುದು ಆಕೆಯ ಗುರಿಯಾಗಿತ್ತು. ಆದರೆ, ಇತ್ತೀಚೆಗೆ ಅವರು ಹಲವಾರು ಫಾಲೋವರ್‌ಗಳನ್ನು ಕಳೆದುಕೊಂಡಿದ್ದರು ಫಾಲೋವರ್‌ಗಳು ಈಕೆ ಖಾತೆಯನ್ನು ಅನ್‌ಲೈಕ್ ಮತ್ತು ಅನ್‌ಫಾಲೋ ಮಾಡಿದ್ದರು.
ಇದರಿಂದ ಗಾಬರಿ ಬಿದ್ದ ಮಿಶಾ ಅಗರ್ವಾಲ್ ಅವರು ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟ್ ಮಾಡುವ ತಮ್ಮ ವೃತ್ತಿಜೀವನವು ಅಂತ್ಯಗೊಳ್ಳುತ್ತಿದೆ ಎಂಬ ಭಯದಿಂದ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಂಬಂಧಿಗಳು ಹೇಳಿದ್ದಾರೆ.
ಮಿಶಾ ಅವರ ಸಾ*ವಿನ ಬಗ್ಗೆ ನಟಿ ತಾಪ್ಸಿ ಪನ್ನು ಆತಂಕ ವ್ಯಕ್ತಪಡಿಸಿ, ಇದೊಂದು ಹೃದಯವಿದ್ರಾವಕ ಘಟನೆಯಾಗಿದೆ. ಸಾಮಾಜಿಕ ಮಾಧ್ಯಮಗಳ ಕುರಿತಾಗಿ ಹೆಚ್ಚುತ್ತಿರುವ ಯುವಜನರ ಗೀಳಿನ ಬಗ್ಗೆ ಕಳವಳ ಹೊರಹಾಕಿದ್ದಾರೆ. ಸಾಮಾಜಿಕ ಮಾಧ್ಯಮವು ಮಾನಸಿಕ ಆರೋಗ್ಯದ ಮೇಲೆ ಪ್ರಭಾವಗ ಬೀರುತ್ತಿದೆ ಎಂದಿದ್ದಾರೆ.
“ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಬಹಳಷ್ಟು ಜನರ ಗೀಳನ್ನು ನೋಡಿ ನಾನು ಬಹಳ ದಿನಗಳಿಂದ ಭಯಪಡುತ್ತಿದ್ದೇನೆ. ಇಂತಹದ್ದೊಂದು ದಿನ ಬರುತ್ತವೆ ಎಂಬ ಭಯ ಹಿಂದಿನಿಂದಲೂ ನನ್ನನ್ನು ಕಾಡುತ್ತಿತ್ತು” ಎಂದು ತಾಪ್ಸಿ ಪನ್ನು ಹೇಳಿದ್ದಾರೆ.
“ವರ್ಚುವಲ್ ಪ್ರೀತಿಯ ತೀವ್ರ ಅಗತ್ಯವು ನಿಮ್ಮ ಸುತ್ತಲಿನ ನಿಜವಾದ ಪ್ರೀತಿಯ ಕುರಿತು ನಿಮ್ಮನ್ನು ಕುರುಡಾಗಿಸುತ್ತದೆ ಎಂಬ ಭಯ ಕಾಡುತ್ತಲೇ ಇದೆ. ಈ ತ್ವರಿತ ತೃಪ್ತಿ, ಇಷ್ಟಗಳು ಹಾಗೂ ಕಾಮೆಂಟ್‌ಗಳು ನಿಮ್ಮನ್ನು ಹೆಚ್ಚು ಯೋಗ್ಯರನ್ನಾಗಿ ಮಾಡುವುದಿಲ್ಲ. ಬದಲಾಗಿ, ಮಾನಸಿಕ ರೋಗಿಯನ್ನಾಗಿಸುತ್ತದೆ. ಇಂತಹ ಘಟನೆಗಳನ್ನು ನೋಡುವುದು ಹೃದಯವನ್ನು ಹಿಂಡುತ್ತದೆ” ಎಂದಿದ್ದಾರೆ.