ತೊಕ್ಕೊಟ್ಟು, ಕಣ್ಣೂರಿನಲ್ಲಿ ಯುವಕರ ಮೇಲೆ ಹಲ್ಲೆ

ಮಂಗಳೂರು: ಬಜ್ಪೆಯ ಕಿನ್ನಿಪದವು ಎಂಬಲ್ಲಿ ಸುಹಾಸ್‌ ಶೆಟ್ಟಿ ಹ*ತ್ಯೆಯ ಬೆನ್ನಲ್ಲೇ ತೊಕ್ಕೊಟ್ಟು ಒಳಪೇಟೆ ಹಾಗೂ ಅಡ್ಯಾರ್ ಕಣ್ಣೂರಿನಲ್ಲಿ ಯುವಕರಿಬ್ಬರ ಮೇಲೆ ಹಲ್ಲೆ ನಡೆದಿದ್ದಾಗಿ ಪೊಲೀಸ್‌ ಮೂಲಗಳಿಂದ ಮಾಹಿತಿ ಲಭಿಸಿದೆ.
ತೊಕ್ಕೊಟ್ಟು ಒಳಪೇಟೆ ಬಳಿ ಫೈಝಲ್ ಹಾಗೂ ಅಡ್ಯಾರ್ ಕಣ್ಣೂರಿನ ಬಳಿ ನೌಷಾದ್ ಎಂಬವರು ಹಲ್ಲೆಗೊಳಗಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೊಕ್ಕೊಟ್ಟು ಒಳಪೇಟೆ ಬಳಿ ಅಳೇಕಲ ನಿವಾಸಿ ಫೈಝಲ್ ಕಲ್ಲಾಪು ಮಾರುಕಟ್ಟೆಗೆ ಬರುತ್ತಿದ್ದ ವೇಳೆ ಒಳಪೇಟೆ ಬಳಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇದೇ ರೀತಿ ನೌಶಾದ್ ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪಿನ ಮಾರ್ಕೆಟ್‌ಗೆ ಹೋಗಲು ಮುಂಜಾನೆ 3 ಗಂಟೆಗೆ ಅಡ್ಯಾರ್ ಕಣ್ಣೂರು ಹೆದ್ದಾರಿಯಲ್ಲಿ ನಿಂತಿದ್ದ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ನೌಷಾದ್‌ರ ಬೆನ್ನಿಗೆ ಚೂರಿಯಿಂದ ಇರಿದರು ಎಂದು ಪೊಲೀಸರು ತಿಳಿಸಿದ್ದಾರೆ.


ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ನೌಷಾದ್ ಓಡಿ ಪರಾರಿಯಾಗಿದ್ದು, ಬಳಿಕ‌ ಸ್ಥಳೀಯರು ಆತನನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!