ಸುಹಾಸ್‌ ಶೆಟ್ಟಿ ಕೊ*ಲೆಗೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸಾಕ್ಷಿ ಪತ್ತೆ

ಮಂಗಳೂರು: ಸುಹಾಸ್‌ ಶೆಟ್ಟಿ ಕೊ*ಲೆಗೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸಾಕ್ಷ್ಯವೊಂದು ಲಭ್ಯವಾಗಿದ್ದಾಗಿ ಪೊಲೀಸ್‌ ಮೂಲಗಳಿಂದ ಮಾಹಿತಿ ಲಭಿಸಿದೆ. ಸುಹಾಸ್‌ ಶೆಟ್ಟಿಯನ್ನು ಹ*ತ್ಯೆಗೆ ಬಳಸಿದ ಮಾರಾಕಾಸ್ತ್ರ ಬಟನ್‌ ಡ್ರ್ಯಾಗರ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಂಗಳೂರು ಹೊರ ವಲಯದ ಬಜ್ಪೆಯ ಕಿನ್ನಿಪದವು ಎಂಬಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ಸ್ವಿಫ್ಟ್‌ ಮತ್ತು ಮೀನಿನ ಪಿಕಪ್‌ನಲ್ಲಿ ಅಟಕಾಯಿಸಿದ ನಾಲ್ಕರಿಂದ ಐದು ಮಂದಿ ಇದ್ದ ತಂಡ ಸುಹಾಸ್‌ ಶೆಟ್ಟಿಯ ಮೇಲೆರಗಿ ತಲವಾರಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೊ*ಲೆ ಮಾಡಿದ ಬಳಿಕ ಹಂಚಕರು ಬಟನ್‌ ಡ್ರ್ಯಾಗರ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಇದು ಪ್ರಕರಣದ ಪ್ರಮುಖ ಸಾಕ್ಷ್ಯದಲ್ಲಿ ಒಂದಾಗಿದ್ದು, ಹಂತಕರ ಎರಡು ವಾಹನಗಳು ಮತ್ತು ಸುಹಾಸ್‌ ಶೆಟ್ಟಿ ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ 11 ಬಾರಿ ಇರಿದು ಕೊ*ಲೆ ಮಾಡಿದ್ದು, ಹಂತಕರ ಬಂಧನಕ್ಕೆ ನಾಲ್ಕು ಪೊಲೀಸ್ ತಂಡ ರಚಿಸಲಾಗಿದೆ. ಅಲ್ಲದೆ, ಸ್ಥಳೀಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ ಅಗರವಾಲ್ ತಿಳಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್‌ ಕೂಡ ಪ್ರತಿಕ್ರಿಯೆ ನೀಡಿ ತನಿಖೆಗೆ 4 ತಂಡ ರಚನೆ ಮಾಡಲಾಗಿದೆ. ಕೊ*ಲೆಗಾರರನ್ನು ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ತನಿಖೆ ಮುಂದುವರೆದಿದೆ ಯಾರೇ ಆಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಈ ನಡುವೆ

ಘಟನೆಗೆ ಸಂಬಂಧ ಸುಹಾಸ್ ಶೆಟ್ಟಿ ಮಾವ ಚಂದ್ರಶೇಖರ್ ಚಾನಲ್‌ ಒಂದಕ್ಕೆ ಹೇಳಿಕೆ ನೀಡಿದ್ದು, ಸುಹಾಸ್ ಮೃತಪಟ್ಟಿರುವ ವಿಚಾರವನ್ನು ಇನ್ನು ಹೆತ್ತವರಿಗೆ ತಿಳಿಸಿಲ್ಲ. ಸುಹಾಸ್ ತಂದೆ ತಾಯಿ ಇಬ್ಬರೂ ಕೂಡ ಅನಾರೋಗ್ಯ ಪೀಡಿತರು ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ. ಈ ರೀತಿ ಯಾರಿಗೂ ಕೂಡ ಸಾವು ಬರಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು, ಕುಟುಂಬ ತೀವ್ರ ಸಂಕಷ್ಟದಲ್ಲಿದೆ. ಸುಹಾಸ್ ಶೆಟ್ಟಿ ಬಳಿ ಇದ್ದ ಆಯುಧಗಳನ್ನು ಪೊಲೀಸರು ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿದ್ದರು. ಮೈಸೂರಿನ ಕೆ ಆರ್ ನಗರದಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ಸುಹಾಸ್ ಶೆಟ್ಟಿ ಕುಟುಂಬ ಐದಾರು ವರ್ಷಗಳ ಹಿಂದೆ, ಮಂಗಳೂರಿಗೆ ಬಂದು ನೆಲೆಸಿದ್ದರು. ಮೃತದೇಹವನ್ನು ನೋಡಿದೆ ಮನಸ್ಸು ಇಚ್ಛೆ ಮಾರಕಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

error: Content is protected !!