ಯುದ್ಧ ನಡೆದರೆ ಭಾರತದಲ್ಲಿನ ಪಂಜಾಬಿಗರು ಪಾಕಿಸ್ತಾನ ಸೈನಿಕರಿಗೆ ಊಟ ಹಾಕುತ್ತಾರೆ ಎಂದ ಉಗ್ರ ಪನ್ನೂನ್

ನವದೆಹಲಿ: ಪಹಲ್ಗಾಂ ಘಟನೆಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ನಡುವೆಯೇ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಭಾರತದ ವಿರುದ್ಧ ತನ್ನ ನಾಲಗೆಯನ್ನು ಬೇಕಾಬಿಟ್ಟಿ ಹರಿಯಬಿಟ್ಟಿದ್ದಾನೆ.

ವಿಡಿಯೋ ಒಂದನ್ನು ಹರಿಯಬಿಟ್ಟಿರುವ ಪನ್ನೂನ್‌, ʻಭಾರತ- ಪಾಕಿಸ್ತಾನ ಯುದ್ಧ ನಡೆದರೆ ಭಾರತದಲ್ಲಿನ ಪಂಜಾಬಿಗರು ಪಾಕಿಸ್ತಾನ ಸೈನಿಕರಿಗೆ ಊಟ ಹಾಕುತ್ತಾರೆʼ ಎಂದು ಹೇಳಿದ್ದಾನೆ.

‘ಪಾಕಿಸ್ತಾನವು ನಮ್ಮ ಮಿತ್ರ ರಾಷ್ಟ್ರ. ಒಮ್ಮೆ ಪಂಜಾಬ್‌ ಪ್ರತ್ಯೇಕಗೊಂಡ ಬಳಿಕ ಪಾಕಿಸ್ತಾನ ನಮ್ಮ ನೆರೆಯ ದೇಶವಾಗಲಿದೆ. ಜೊತೆಗೆ ಭಾರತದಲ್ಲಿನ ಸಿಖ್‌ ಸೈನಿಕರು ಯುದ್ಧದಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿರುವ ಪನ್ನೂನ್‌, ಈ ಯುದ್ಧ ಭಾರತ ಮತ್ತು ಮೋದಿಗೆ ಕೊನೆಯ ಯುದ್ಧವಾಗಲಿದೆʼ ಎಂದು ವಿಡಿಯೋದಲ್ಲಿ ಹೇಳಿದ್ದಾನೆ ಎಂದು ಪಾಕಿಸ್ತಾನದ ಡಾನ್‌ ಪತ್ರಿಕೆ ವರದಿ ಮಾಡಿದೆ.

ಗುರುಪತ್ವಂತ್ ಸಿಂಗ್​ನನ್ನು ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸುವ ಭಯೋತ್ಪಾದಕ ಎಂದು ಭಾರತ ಘೋಷಿಸಿದೆ. ಆತ ಅಮೆರಿಕಾದಲ್ಲಿ ಖಲಿಸ್ತಾನ್ ಚಳವಳಿಯನ್ನು ಮುನ್ನಡೆಸುತ್ತಿದ್ದಾನೆ. ಈತ ನಡೆಸುತ್ತಿದ್ದ ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯನ್ನೂ ಭಾರತ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

error: Content is protected !!