ಜಲಪಾತಕ್ಕೆ ಕರೆದೊಯ್ದು ಫ್ಯಾಮಿಲಿ ಮ್ಯಾನ್ ನಟನ ಕೊಲೆ ಶಂಕೆ

ಗುವ್ಹಾಟಿ: ಫ್ಯಾಮಿಲಿ ಮ್ಯಾನ್ 3 ವೆಬ್‌ಸರೀಸ್ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದ್ದ ನಟ ರೋಹಿತ್ ಬಾಸ್‌ಫೋರೆ ಅವರ ಮೃತದೇಹ ಗುಹ್ವಾಟಿಯ ಘರ್ಬಂಗಾ ಜಲಪಾತದ ಬಳಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಅಸ್ಸಾಂ ಪೊಲೀಸರು ಸ್ಥಳಕ್ಕೆ ಧಾವಿಸಿ ಮತೃದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ತನಿಖೆ ಆರಂಭಿಸಿದ್ದಾರೆ.

‘Family Man 3’ actor Rohit Basfore found dead in Assam; family suspects foul play

ಅಸ್ಸಾಂ ಮೂಲದ ರೋಹಿತ್ ಫ್ಯಾಮಿಲಿ ಮ್ಯಾನ್ 3 ಸೂಪರ್ ಹಿಟ್ ವೆಬ್‌ಸೀರಿಸ್‌ನಲ್ಲಿ ಪ್ರಮುಖ ಪಾತ್ರ ನಿಭಾಯಿಸಿ ಭಾರಿ ಜನಪ್ರಿಯತೆ ಗಳಿಸಿದ್ದರು. ಸತತ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ರೋಹಿತ್ ಬಾಸ್‌ಫೊರೆ ಕೆಲ ದಿನಗಳ ಹಿಂದೆ ತವರಿಗೆ ಆಗಮಿಸಿ ದಾರುಣ ಅಂತ್ಯ ಕಂಡಿದ್ದಾರೆ.

ಎ.27 ಮಧ್ಯಾಹ್ನ 12.30ರ ಸುಮಾರಿಗೆ ಮನೆಯಿಂದ ಗೆಳೆಯರ ಜೊತೆ ಪ್ರವಾಸಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟ ರೋಹಿತ್ ಬಳಿಕ ಮನಗೆ ಬಂದಿಲ್ಲ. ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ರೋಹಿತ್ ಪೋಷಕರು ಹಾಗೂ ಕುಟುಂಬಸ್ಥರು ಅಸ್ಸಾಂ ಪೊಲೀಸರಿಗೆ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ರೋಹಿತ್ ಗೆಳೆಯನೊಬ್ಬ ಕುಟುಂಬದ ಸದಸ್ಯರಿಗೆ ಕರೆ ಮಾಡಿ, ರೋಹಿತ್ ಸಂಚರಸುತ್ತಿರುವಾಗ ಅಪಘಾತವಾಗಿದ್ದು, ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ರೋಹಿತ್ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದ. ಆದರೆ ರೋಹಿತ್ ಟವರ್ ಲೊಕೇಶನ್ ಪತ್ತೆ ಹಚ್ಚಿದ ಪೊಲೀಸರು ಘರ್ಬಂಗ್ ವಾಟರ್‌ಫಾಲ್ ಬಳಿ ಮೃತದೇಹ ಪತ್ತೆ ಹಚ್ಚಿದ್ದಾರೆ. ರೋಹಿತ್ ದೇಹದಲ್ಲಿ ಹಲವು ಗಾಯದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ರೋಹಿತ್ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ.

ಕಾರಣ ಇತ್ತೀಚೆಗೆ ಪಾರ್ಕಿಂಗ್ ವಿಚಾರದಲ್ಲಿ ನಡೆದ ಜಗಳದಲ್ಲಿ ರೋಹಿತ್ ಹತ್ಯೆ ಮಾಡಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.

ಪಾರ್ಕಿಂಗ್ ವಿಚಾರದಲ್ಲಿ ರಂಜಿತ್ ಬಾಸ್‌ಫೊರೆ, ಅಶೋಕ್ ಬಾಸ್‌ಫೊರೆ, ಧರ್ಮ ಬಸ್‌ಫೊರೆ ಪಾರ್ಕಿಂಗ್ ವಿಚಾರದಲ್ಲಿ ರೋಹಿತ್ ಜೊತೆ ಜಗಳವಾಡಿದ್ದರು. ಈ ವೇಳೆ ಕೊಲೆ ಬೆದರಿಕೆ ಹಾಕಿದ್ದರು. ಇತ್ತ ಭಾನುವಾರ ಜಿಮ್ ಮಾಲೀಕ ಅಮರ್ದೀಪ್ ಪ್ರವಾಸಕ್ಕೆ ಹೋಗಲು ರೋಹಿತ್‌ನ ಕರೆದಿದ್ದರು. ಪೋಷಕರು ಇದೀಗ ಅಮರ್ದೀಪ್ ವಿರುದ್ಧವೂ ಕೊಲೆ ಆರೋಪ ಮಾಡಿದ್ದಾರೆ. ಇದು ವ್ಯವಸ್ಥಿತವಾಗಿ ಕರೆಸಿ ಮಾಡಿದ ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.

ರೋಹಿತ್ ಬಾಸ್‌ಫೋರೆ ದೇಹದಲ್ಲಿ ದಾಳಿ ಮಾಡಿದ, ಹಲ್ಲೆ ಮಾಡಿದ ಗುರುತುಗಳಿದ್ದು, ಇದೊಂದು ವ್ಯವಸ್ಥಿತ ಕೊಲೆ ಎನ್ನುವ ಅನುಮಾನ ವ್ಯಕ್ತವಾಗಿದೆ.

error: Content is protected !!