ಪಂಜ: ಇಲ್ಲಿನ ಯ ಶ್ರೀ ವಿಠೋಬ ಭಜನಾ ಮಂದಿರದ 2026-2028ನೇ ಸಾಲಿನ ಮಹಾಸಭೆಯು ಫೆಬ್ರವರಿ 8ರ ಭಾನುವಾರದಂದು ಮಂದಿರದ ಆವರಣದಲ್ಲಿ ಜರುಗಿತು.
ಈ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಮಂದಿರದ ಗೌರವ ಅಧ್ಯಕ್ಷರುಗಳಾಗಿ ಬೋಳ ರಘುರಾಮ ಶೆಟ್ಟಿ ಮುಂಬೈ ಮತ್ತು ಸದಾನಂದ M. ಶೆಟ್ಟಿ ಪಂಜ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಭರತ್ ರಾಜ್ ಶೆಟ್ಟಿ ಪಂಜ ಅವರು ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಪ್ರಮೋದ್ ಶೆಟ್ಟಿ ಅಂಗಡಿ ಗುತ್ತು ಮತ್ತು ಕೇಶವ ಪೂಜಾರಿ ಪಂಜ, ಕಾರ್ಯದರ್ಶಿಯಾಗಿ ಅವಿನಾಶ್ ಶೆಟ್ಟಿ ಬಾಕಿಮಾರುಗುತ್ತು, ಜೊತೆ ಕಾರ್ಯದರ್ಶಿಯಾಗಿ ವಿನ್ಯಾಸ್ ಶೆಟ್ಟಿ ಪಂಜದಗುತ್ತು ಹಾಗೂ ಕೋಶಾಧಿಕಾರಿಗಳಾಗಿ ಪದ್ಮನಾಭ ಪೂಜಾರಿ ಮತ್ತು ಲಕ್ಷ್ಮೀ ಶ ಶೆಟ್ಟಿ ಆಯ್ಕೆಯಾದರು.
ಪ್ರಧಾನ ಭಜನೆ ಸಂಚಾಲಕರಾಗಿ ಸತೀಶ್ ಶೆಟ್ಟಿ ಬೈಲಗುತ್ತು ಹಾಗೂ ಕರುಣಾಕರ ಶೆಟ್ಟಿ ಪಂಜದಗುತ್ತು ನೇಮಕಗೊಂಡರೆ, ಪೂಜಾ ಕೈಂಕರ್ಯದ ಜವಾಬ್ದಾರಿಯನ್ನು ಸತೀಶ್ ಶೆಟ್ಟಿ ಪಂಜದಗುತ್ತು ಮತ್ತು ಅಶೋಕ ಪೂಜಾರಿ ಅವರಿಗೆ ವಹಿಸಲಾಯಿತು. ನಾರಾಯಣ ಬಿ. ಶೆಟ್ಟಿ ಅವರು ಲೆಕ್ಕ ಪತ್ರ ನಿರ್ವಾಹಕರಾಗಿ ಆಯ್ಕೆಯಾದರು. ಸಭೆಯಲ್ಲಿ ಗೌರವ ಸಲಹೆಗಾರರು ಹಾಗೂ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
