ಕಾರ್ಕಳ: ಕಾರಿನೊಳಗೆ ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ನಿಟ್ಟೆ ಸಮೀಪದ ದೂಪದಕಟ್ಟೆ ಎಂಬಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಕಾರ್ಕಳ ನಿವಾಸಿ ಉದ್ಯಮಿ ದಿಲೀಪ್ ಎನ್.ಆರ್. ಆತ್ಮಹತ್ಯೆ ಮಾಡಿಕೊಂಡವರು. ನಿನ್ನೆ ರಾತ್ರಿ ಮಂಗಳೂರಿನಿಂದ ಕಾರಿನಲ್ಲಿ ಕಾರ್ಕಳಕ್ಕೆ ಹೊರಟ್ಟಿದ್ದರು. ನಿಟ್ಟೆ ದೂಪಕಟ್ಟೆಯ ನವೋದಯ ಪ್ರಾಪರ್ಟಿಸ್ ಮುಂಭಾಗದಲ್ಲಿ ಕಾರ್ ನಿಲ್ಲಿಸಿದ್ದ ಅವರು ಕಾರಿನಲ್ಲೇ ವಿಷ ಸೇವಿಸಿ ತಮ್ಮಲ್ಲಿದ್ದ ಗನ್ ಮೂಲಕ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರು ಕಾರ್ಕಳ ಪುರಸಭೆ ಸದಸ್ಯ ಸುಭೀತ್ ಎನ್.ಆರ್. ಅವರ ಸಹೋದರರಾಗಿದ್ದಾರೆ.