ಹೇಗೆ ಕ್ಷಮೆ ಯಾಚಿಸುವುದೆಂದೇ ತಿಳಿದಿಲ್ಲ: ಪಹಲ್ಗಾಂ ದುರ್ಘಟನೆಗೆ ಕ್ಷಮೆ ಯಾಚಿಸಿದ ಒಮರ್‌ ಅಬ್ದುಲ್ಲ

ಶ್ರೀನಗರ: ಪಹಲ್ಗಾಂನಲ್ಲಿ ಉಗ್ರರು ನಡೆಸಿದ 26 ಮಂದಿ ಭಾರತೀಯರು ಹಾಗೂ ಇಬ್ಬರು ವಿದೇಶಿ ಪ್ರಜೆಗಳು ಸೇರಿ 28 ಮಂದಿಯ ಭೀಕರ ನರಮೇಧಕ್ಕೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ವಿಷಾದ ವ್ಯಕ್ತಪಡಿಸಿದ್ದು, ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯಲ್ಲಿ ನಾವು ವಿಫಲರಾಗಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ.

article-image
ಇಂದು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಖಂಡನಾ ಸಂಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದುರಂತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ ಎಂದು ಹೇಳಿದರು.

“ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಹಿಂದೆ ಇಂತಹ ಹಲವು ದಾಳಿಗಳನ್ನು ನಾವು ನೋಡಿದ್ದೆವು… ಆದರೆ 21 ವರ್ಷಗಳ ಆನಂತರ ಬೈಸರನ್ ನಲ್ಲಿ ಇಷ್ಟು ದೊಡ್ಡ ಪ್ರಮಾಣದ ದಾಳಿ ನಡೆಸಲಾಗಿದೆ” ಎಂದು ಒಮರ್ ಅಬ್ದುಲ್ಲಾ ಹೇಳಿದರು. “ಮೃತರ ಕುಟುಂಬಗಳಿಗೆ ಹೇಗೆ ಕ್ಷಮೆಯಾಚಿಸುವುದೆಂದೇ ನನಗೆ ತಿಳಿದಿರಲಿಲ್ಲ… ಆತಿಥೇಯನಾಗಿ, ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವುದು ನನ್ನ ಕರ್ತವ್ಯವಾಗಿತ್ತು. ನನಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಕ್ಷಮೆಯಾಚಿಸಲು ನನಗೆ ಪದಗಳಿಲ್ಲ” ಎಂದು ಅವರು ಹೇಳಿದರು.

ಮುಂದುವರಿದು ಮಾತನಾಡಿದ ಅಬ್ದುಲ್ಲಾ, “ನಾನು ಈ ಕ್ಷಣವನ್ನು ರಾಜ್ಯತ್ವ (ಸ್ವತಂತ್ರ/ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ) ಬೇಡಲು ಬಳಸುವುದಿಲ್ಲ. ಪಹಲ್ಗಾಮ್ ನಂತರ, ನಾನು ಯಾವ ಮುಖದೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನವನ್ನು ಕೇಳಬಹುದು? ʻಮೇರಿ ಕ್ಯಾ ಇತ್ನಿ ಸಸ್ತಿ ಸಿಯಾಸತ್ ಹೈ?ʼ ನಾವು ಹಿಂದೆ ರಾಜ್ಯತ್ವದ ಬಗ್ಗೆ ಮಾತನಾಡಿದ್ದೇವೆ ಮತ್ತು ಭವಿಷ್ಯದಲ್ಲಿಯೂ ಹಾಗೆ ಮಾಡುತ್ತೇವೆ, ಆದರೆ ನಾನು ಈಗ ಹೋಗಿ ಕೇಂದ್ರ ಸರ್ಕಾರಕ್ಕೆ 26 ಜನರು ಸತ್ತಿದ್ದಾರೆ, ಈಗ ನನಗೆ ರಾಜ್ಯತ್ವ ನೀಡಿ ಎಂದು ಹೇಳಿದರೆ ಅದು ನನ್ನ ಪ್ರಕಾರ ನಾಚಿಕೆಗೇಡಿನ ಸಂಗತಿ” ಎಂದು ಹೇಳಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

https://x.com/i/status/1916759393141748130https://twitter.com/i/status/1916759393141748130

error: Content is protected !!