ತುರ್ತು ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ; ಫೆ.12 ರಂದು ರಾಷ್ಟ್ರವ್ಯಾಪಿ ಬ್ಯಾಂಕ್​ ಮುಷ್ಕರ!

ನವದೆಹಲಿ: ಬ್ಯಾಂಕ್​ಗಳ ಖಾಸಗೀಕರಣ ಮತ್ತು ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಫೆಬ್ರವರಿ 12ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಪ್ರಮುಖ ಬ್ಯಾಂಕುಗಳು ಫೆ.12 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿವೆ. ತುರ್ತು ಬ್ಯಾಂಕ್(Bank) ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ, ನಾಳೆಗೆ ಮುಂದೂಡಿದರೆ ಸೇವೆಗಳ ಮೇಲೆ ಪರಿಣಾಮ ಬೀರಬಹುದೆಂದು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸೂಚನೆ ನೀಡಿವೆ.

ಶಾಖೆಗಳು ತೆರೆದಿರಬಹುದು ಆದರೆ ನಗದು ವಹಿವಾಟು ಮತ್ತು ಚೆಕ್ ಕ್ಲಿಯರಿಂಗ್ ಕೆಲಸದಲ್ಲಿ ವಿಳಂಬವಾಗಬಹುದು ಆದರೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಹಿಂದೂ ಮಜ್ದೂರ್ ಕಿಸಾನ್ ಪಂಚಾಯತ್​ನ ಪ್ರಾಂತೀಯ ನಾಯಕ ಮೊಹಮ್ಮದ್ ಹಸ್ನೈನ್ ಅನ್ಸಾರಿ, ಉತ್ತರ ಪ್ರದೇಶ ಕಿಸಾನ್​​ನ ಇಂದ್ರದೇವ್ ಪಾಲ್ ಅವರು 12ರಂದು ಜಿಲ್ಲೆಯಲ್ಲಿ ಮತ್ತು ಇಡೀ ಭಾರತದಲ್ಲಿ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಬ್ಯಾಂಕ್​ಗಳು, ಭಾರತೀಯ ಜೀವ ವಿಮಾ ನಿಗಮ, ಅಂಚೆ ಕಚೇರಿಗಳು ಮುಚ್ಚಲ್ಪಡುತ್ತವೆ. ಮಂಗಳವಾರ ಬ್ಯಾಂಕ್ ಹಾಗೂ ಎಲ್​ಐಸಿ ಉದ್ಯೋಗಿಗಳನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ.

ವಾರದಲ್ಲಿ ಕೇವಲ ಐದು ದಿನಗಳ ಕೆಲಸಕ್ಕೆ ಒತ್ತಾಯಿಸಿ ಜನವರಿ 27ರಂದು ಬ್ಯಾಂಕ್​ಗಳು ಒಂದು ದಿನದ ಮುಷ್ಕರವನ್ನು ನಡೆಸಿದ್ದರು. ಕಳೆದ ವರ್ಷದ ಕೊನೆಯಲ್ಲಿ ಸರ್ಕಾರವು ಅಧಿಸೂಚನೆ ಹೊರಡಿಸಿದ ನಾಲ್ಕು ಹೊಸ ಕಾರ್ಮಿಕ ಕಾನೂನುಗಳನ್ನು ವಿರೋಧಿಸಲು ಫೆಬ್ರವರಿ 12 ರಂದು ಅವರು 10 ಕೇಂದ್ರ ಕಾರ್ಮಿಕ ಸಂಘಗಳು ಕರೆದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಳೆಯ ಪಿಂಚಣಿ ಮತ್ತು ಹೊಸ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಆದರೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬುದು ಅವರ ವಾದ.

ಪರಿಣಾಮವಾಗಿ, ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಫೆಬ್ರವರಿ 12 ರಂದು ಬೃಹತ್ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಆದರೆ ಬ್ಯಾಂಕುಗಳು ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ 12 ಅನ್ನು ಬ್ಯಾಂಕ್ ರಜಾದಿನವೆಂದು ಘೋಷಿಸಿಲ್ಲ. ಹಾಗಾಗಿ ಇದು ಶಾಖೆಗಳು ತೆರೆದಿರುವ ನಿರೀಕ್ಷೆಯಿದೆ.

ಸರ್ಕಾರವು ನವೆಂಬರ್‌ನಲ್ಲಿ ಸೂಚಿಸಿದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸುವುದು ಈ ಮುಷ್ಕರದ ಉದ್ದೇಶವಾಗಿದೆ. ಫೆಬ್ರವರಿ 12 ರಂದು ಈ ಸಂಸ್ಥೆಗಳು ಮುಷ್ಕರ ನಡೆಸಲಿವೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತಿಳಿಸಿದೆ.

error: Content is protected !!