ಮಂಗಳೂರು: ಚಲಿಸುತ್ತಿದ್ದ ಸಿಟಿ ಬಸ್ಸಿನ ಟೈರ್ ಭಾರೀ ಶಬ್ದದೊಂದಿಗೆ ಒಡೆದ ಪರಿಣಾಮ ಕಿಟಕಿ ಭಾಗದ ಗಾಜು ಒಡೆದು ಬಸ್ಸಿನಲ್ಲಿ ಸಂಚರಿಸುತ್ತಿದ್ದ ಶಾಲಾ ಬಾಲಕಿಯ ಮುಖಕ್ಕೆ ಗಾಯವಾದ ಘಟನೆ ಇಂದು ಮಧ್ಯಾಹ್ನ ನಗರದ ಬಿಜೈ ಚರ್ಚ್ ಬಳಿ ನಡೆದಿದೆ.
ಸ್ಟೇಟ್ ಬ್ಯಾಂಕ್ ಕಡೆಯಿಂದ ಬೋಂದೆಲ್ ಗೆ ಹೋಗುತ್ತಿದ್ದ 19 ನಂಬ್ರದ ಮೂಕಾಂಬಿಕಾ ಹೆಸರಿನ ಸಿಟಿ ಬಸ್ ಬಿಜೈ ಬಳಿ ಬರುವಾಗ ಟೈರ್ ಒಡೆದು ಘಟನೆ ನಡೆದಿದೆ. ಬಸ್ ಪ್ರಯಾಣಿಕರು ಬೇರೆ ಬಸ್ಸಿನಲ್ಲಿ ಸಂಚರಿಸುವಂತಾಯಿತು.