ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸನ್ನದ್ಧ ಸ್ಥಿತಿ ಉಂಟಾಗಿದೆ. ಭಾರತವು ತನ್ನ ಮೇಲೆ ದಾಳಿ ನಡೆಸಬಹುದೆನ್ನುವ ಭೀತಿಯಲ್ಲಿರುವ ಪಾಕಿಸ್ತಾನ ವಾಯುಪಡೆ (ಪಿಎಎಫ್) ಚೀನಾದಿಂದ ಸುಧಾರಿತ ಪಿಎಲ್ -15 ಏರ್-ಟು-ಏರ್ ಕ್ಷಿಪಣಿಗಳನ್ನು ಪಡೆದುಕೊಂಡಿದೆ ಎಂದು ಇಂಡಿಯಾ ಡಾಟ್ ಕಾಂ ವರದಿ ಮಾಡಿದೆ. ಒಂದು ವೇಳೆ ಯುದ್ಧ ನಡೆದ ಚೀನಾ ಪಾಕಿಸ್ತಾನದ ಪರವಾಗಿ ನಿಲ್ಲುವ ಎಲ್ಲಾ ಲಕ್ಷಣಗಳೂ ಗೋಚರಿಸಿದೆ.
ಭಾರತ ತನ್ನ ಗಡಿಭಾಗದಲ್ಲಿ ಈಗಾಗಲೇ ರಫೇಲ್ ಫೈಟರ್ ಜೆಟ್‌ಗಳನ್ನು ತನ್ನ ಗಡಿಗಳಲ್ಲಿ ನಿಯೋಜಿಸಿದೆ. ಪಾಕಿಸ್ತಾನದ ಬಳಿ ಪರಮಾಣು ಶಸ್ತ್ರವಿದ್ದರೂ ಖಂಡಾಂತರ ಕ್ಷಿಪಣಿಯ ಕೊರತೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಚೀನಾದ ಮೊರೆ ಹೋಗಿದ್ದು, ಅವರ ಬೇಡಿಕೆಯನ್ನು ಕ್ಷಣಾರ್ಧದಲ್ಲಿ ಈಡೇರಿಸಿ ಭಾರತದ ವಿರುದ್ಧ ನಿಂತಿದೆ.
ಪಾಕಿಸ್ತಾನ ತನ್ನ ಸ್ವತ್ (ಸೈದು ಷರೀಫ್ ವಿಮಾನ ನಿಲ್ದಾಣ) ಮತ್ತು ಸ್ಕಾರ್ಡು (ಖಾದ್ರಿ) ವಾಯುನೆಲೆಗಳನ್ನು ಸಹ ಸಕ್ರಿಯಗೊಳಿಸಿದೆ,. ಪಾಕಿಸ್ತಾನ ಏರ್ ಫೋರ್ಸ್ ಸ್ವಾತ್‌ನಲ್ಲಿರುವ ಸೈದು ಷರೀಫ್ ವಿಮಾನ ನಿಲ್ದಾಣವನ್ನು ವಾಯುನೆಲೆಯಾಗಿ ಬದಲಿಸಿ ಕಾರ್ಯಾಚರಣೆಗ ನಡೆಸಲು ಸಜ್ಜುಗೊಳಿಸಿದೆ. ಹಾಗೂ ಸ್ಕಾರ್ಡು (ಖಾದ್ರಿ) ವಾಯುನೆಲೆಯನ್ನೂ ಸಹ ಕಾರ್ಯಾಚರಣೆಗೆ ಸಜ್ಜುಗೊಳಿಸಿ ತನ್ನ ವಾಯುಬಲವನ್ನು ಪ್ರದರ್ಶಿಸಲು ಸಜ್ಜಾಗಿದೆ” ಎಂದು ಪಾಕಿಸ್ತಾನ ವಾಯುಪಡೆ ಹೇಳಿದೆ.
ಪಾಕಿಸ್ತಾನದ ನಗರಗಳು ಮತ್ತು ಹಳ್ಳಿಗಳನ್ನು ಕೇಂದ್ರೀಕರಿಸಿ ದೀರ್ಘ-ಶ್ರೇಣಿಯ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾದ ಜೆಎಫ್ -17 ಜೆಟ್‌ಗಳನ್ನು ಭಾರತೀಯ ಗಡಿಯಿಂದ ಕೆಲವು ಕಿ.ಮೀ ದೂರದಲ್ಲಿ ಸ್ವಯಂ ಚಾಲಿತ ಬಂದೂಕುಗಳನ್ನು ನಿಯೋಜಿಸಿದೆ ಎಂದು ವರದಿಗಳು ಸೂಚಿಸುತ್ತವೆ.
ಯುರೇಷಿಯನ್ ಟೈಮ್ಸ್ ಮಾಡಿದ ವರದಿ ಏನು?

ಯುರೇಷಿಯನ್ ಟೈಮ್ಸ್ ಈ ಹಿಂದೆ, PAF ಪಡೆದ ಕ್ಷಿಪಣಿಗಳನ್ನು ನೇರವಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (PLAAF) ನಿಂದ ಪಡೆಯಲಾಗಿದೆಯೇ ಹೊರತು PL-15E ಎಂದು ಕರೆಯಲ್ಪಡುವ ರಫ್ತು ಮಾದರಿಯಿಂದಲ್ಲ ಎಂದು ವರದಿ ಮಾಡಿತ್ತು. ಇದು ನಿಜವೇ ಆಗಿದ್ದರೆ ಎರಡು ನೆರೆಹೊರೆ ರಾಷ್ಟ್ರಗಳ ನಡುವಿನ ಸಂಘರ್ಷದ ಬೆದರಿಕೆ ಹೆಚ್ಚುತ್ತಿರುವ ಸಮಯದಲ್ಲಿ ಪಾಕಿಸ್ತಾನವು ಚೀನಾದಿಂದ ಕ್ಷಣಾರ್ಧದಲ್ಲಿ ಅತ್ಯಂತ ಬೇಗ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದೆ ಎನ್ನುವುದನ್ನು ಸೂಚಿಸುವುದಾಗಿ ಇಂಡಿಯಾ ಡಾಟ್ ಕಾಂ ಯುರೇಷಿಯನ್ ಟೈಮ್ಸ್ ಆದರಿಸಿದ ವರದಿಯಲ್ಲಿ ಹೇಳಿದೆ.
PL-15 ರ ವಿಸ್ತೃತ ಶ್ರೇಣಿಯು ಪಾಕಿಸ್ತಾನಿ ಪೈಲಟ್‌ಗಳಿಗೆ ಹೆಚ್ಚು ದೂರದಿಂದ ಭಾರತೀಯ ವಿಮಾನಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ನೀಡುತ್ತದೆ. PAF ಸಜ್ಜುಗೊಳಿಸಿರುವ PL-15 ಖಂಡಾಂತರ ಕ್ಷಿಪಣಿಯು ಗಾಳಿಯಿಂದ ಗಾಳಿಗೆ ಚಿಮ್ಮುವ ಸಾಮರ್ಥ ಹೊಂದಿದೆ. PAF ವಿಮಾನದಲ್ಲಿ ಕಂಡುಬರುವ PL-15 ಕ್ಷಿಪಣಿಗಳನ್ನು PL-15E ಆಗಿ ರೂಪಾಂತರಿಸಲಾಗಿದ್ದು, ಇದನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (PLAAF) ನ ಆಂತರಿಕ ದಾಸ್ತಾನುಗಳಿಂದ ಪಡೆಯಲಾಗಿದೆ. ಭಾರತ ಪಾಕಿಸ್ತಾನ ಯುದ್ಧ ನಡೆದರೆ ಚೀನಾ ಪಾಕಿಸ್ತಾನಕ್ಕೆ ತುರ್ತಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡಬಹುದು.
ಅತ್ಯಾಧುನಿಕ PL-15 ಕ್ಷಿಪಣಿಗಳ ದೀರ್ಘ-ಶ್ರೇಣಿ’ಯಿಂದಾಗಿ PAF ಗೆ ಸಾಕಷ್ಟು ಪ್ರಯೋಜವಾಗಲಿದೆ. PAF ಫೈಟರ್ ಜೆಟ್‌ಗಳು IAF(ಇಂಡಿಯನ್ ಏರ್ ಫೋರ್ಸ್)ನ ವಿಮಾನಗಳನ್ನು ದೂರದಿಂದಲೇ ಎದುರಿಸಲು ಸಾಧ್ಯವಾಗುತ್ತದೆ. PAF ತನ್ನ ಡ್ಯುಯಲ್ ರ‍್ಯಾಕ್‌ಗಳಲ್ಲಿ ಸಜ್ಜುಗೊಂಡಿರುವ PL-15 ಬಿಯಾಂಡ್ ವಿಷುಯಲ್ ರೇಂಜ್ (BVR) ಏರ್-ಟು-ಏರ್ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾದ ತನ್ನ ಇತ್ತೀಚಿನ JF-17 ಬ್ಲಾಕ್ III ಫೈಟರ್ ವಿಮಾನದ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾಗಿ ಯುರೇಷಿಯನ್ ಟೈಮ್ಸ್ ನಿನ್ನೆ ವರದಿ ಮಾಡಿತ್ತು.
ಈತನ್ಮಧ್ಯೆ ಭಾರತೀಯ ನೌಕಾಪಡೆಯು ಭಾನುವಾರ ತನ್ನ ಯುದ್ಧನೌಕೆಗಗಳಿಂದ ಬಹು ಹಡಗು ವಿರೋಧಿ ಗುಂಡಿನ ದಾಳಿಗಳನ್ನು ಯಶಸ್ವಿಯಾಗಿ ನಡೆಸಿದೆ. ದೀರ್ಘ-ಶ್ರೇಣಿಯ ನಿಖರ “ಆಕ್ರಮಣಕಾರಿ” ದಾಳಿಗಳನ್ನು ಸಜ್ಜುಗೊಳಿಸಿದ್ದಾಗಿ ಹೇಳಿಕೊಂಡಿದೆ. ಭಯೋತ್ಪಾದಕರಿಂದ ನಡೆದ 28 ನಾಗರಿಕರ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಈ ನಡುವೆ ನೌಕಾಪಡೆಯು ತನ್ನ ಬಲ ಪ್ರದರ್ಶನ ಮಾಡಿದೆ. ಈ ಕೃತ್ಯದಲ್ಲಿ ಪಾಕಿಸ್ತಾನದ ನಂಟಿದೆ ಎಂದು ಭಾರತ ಹೇಳಿದ್ದು, ಪ್ರತೀಕಾರ ನಡೆಸುವ ವಾಗ್ದಾನ ಮಾಡಿದೆ.