ಕಾರವಾರ: ಸಮಾಜದಲ್ಲಿ ಧರ್ಮದ ಮುಖವಾಡ ಹಾಕಿಕೊಂಡು ಕೂರುವ ಜ್ಯೋತಿಷಿಗಳ ಅಸಲಿ ಬಣ್ಣ ಬಯಲಾದಾಗ ಅದು ಎಷ್ಟು ಕರಾಳವಾಗಿರುತ್ತದೆ ಎನ್ನುವುದಕ್ಕೆ ಈ ಕಮಲಾಕರ ಭಟ್ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣವೇ ಸಾಕ್ಷಿ. ಆದರೆ, ಈ ಕಥೆಯಲ್ಲಿ ಅತೀ ದೊಡ್ಡ ಟ್ರ್ಯಾಜೆಡಿ ಅಂದ್ರೆ ಯಾರದ್ದೋ ಕಾಮ ಲಾಲಸೆಗೆ ಸಂಬಂಧವೇ ಇಲ್ಲದ ಅಮಾಯಕ ವಸಂತ್ ಪ್ರಾಣ ತೆತ್ತಿರುವುದು.
ವಸಂತ್ ಪತ್ನಿ ಮಾಧ್ಯಮಗಳ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ ಸತ್ಯಗಳಿವೆಯಲ್ಲ, ಅವು ಕೇಳಿದ್ರೆ ನಿಮ್ಮ ಮೈ ಜುಂ ಎನ್ನುತ್ತೆ. ಅಲ್ಲಿ ಪ್ರೀತಿ ಇರಲಿಲ್ಲ, ಕೇವಲ ಹಸಿವಿತ್ತು. ಅದು ಹಣದ ಹಸಿವು ಮತ್ತು ಹೆಣ್ಣಿನ ಹಸಿವು!

ಹಾಸಿಗೆಯ ಬೆಲೆ 300 ರೂಪಾಯಿ!
ವಸಂತ್ ಪತ್ನಿ ಹೇಳುವ ಪ್ರಕಾರ, ಈ ಸುಚಿತ್ರಾ ನಾಯ್ಕ್ ಎಂಬಾಕೆ ಅಕ್ಷರಶಃ ಒಬ್ಬ ʻಸರಕು’ ಆಗಿದ್ದಳು. 300-400 ರೂಪಾಯಿಗೆ ಕಂಡಕಂಡವರ ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದ ಈಕೆಗೆ, ಯಾವಾಗ ಕೋಟ್ಯಧೀಶ್ವರ ಜ್ಯೋತಿಷಿ ಕಮಲಾಕರ ಭಟ್ ಸಿಕ್ಕನೋ, ಅಲ್ಲಿಗೆ ಆಕೆಯ ತಲೆ ತಿರುಗಿಹೋಯ್ತು. ಸುಚಿತ್ರಾಳ ಕಾಟ ತಾಳಲಾರದೆ ಆಕೆಯ ಪತಿ ಮಹೇಶ್ ಬೆಂಗಳೂರಿಗೆ ಓಡಿ ಹೋಗಿದ್ದರು. ಅಷ್ಟರಮಟ್ಟಿಗೆ ಈಕೆ ಮನೆಯೊಳಗೆ ನರಕ ಸೃಷ್ಟಿಸಿದ್ದಳು.

ಮಗಳ ಆಕ್ರಂದನ ಮತ್ತು ವಿಧಿಯಾಟ
ಜ್ಯೋತಿಷಿಯ ಟಾರ್ಚರ್ ಮತ್ತು ತಾಯಿಯ ವಿಕೃತ ವರ್ತನೆ ನೋಡಿ ಸುಚಿತ್ರಾಳ ಮಗಳು ಬೆಚ್ಚಿಬಿದ್ದಿದ್ದಳು. ತನ್ನ ತಂದೆಗೆ ಮೆಸೇಜ್ ಮಾಡಿ ಆಸರೆ ಕೇಳಿದ್ದಳು. ಅಲ್ಲಿಯವರೆಗೆ ಸುಚಿತ್ರಾಳ ಮಗಳ ಮುಖವನ್ನೇ ನೋಡದಿದ್ದ ವಸಂತ್ ಮತ್ತು ಅವರ ಪತ್ನಿ, ಮಾನವೀಯತೆಯ ದೃಷ್ಟಿಯಿಂದ ಆಕೆಯನ್ನು ಮನೆಗೆ ಬರಮಾಡಿಕೊಂಡಿದ್ದರು. ಆ ಹುಡುಗಿ ವಸಂತ್ ಪತ್ನಿಯನ್ನು ಮೊದಲ ಬಾರಿಗೆ ʻದೊಡ್ಡಮ್ಮ’ ಎಂದು ಕರೆದಿದ್ದಳು. ಆದರೆ ಅದೇ ಅವಳ ಕೊನೆಯ ಕರೆಯಾಗುತ್ತೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಐದೇ ನಿಮಿಷದಲ್ಲಿ ಮುಗಿದುಹೋದ ಜೀವ!
ಆ ದಿನ ನಡೆದದ್ದು ಕೇವಲ ಐದಾರು ನಿಮಿಷಗಳ ರಕ್ತಪಾತ. ತೋಟದಿಂದ ಬಂದ ವಸಂತ್ ಮೇಲೆ ಸುಚಿತ್ರಾ ಮತ್ತು ಆಕೆಯ ಗ್ಯಾಂಗ್ ಅಟ್ಯಾಕ್ ಮಾಡಿತ್ತು. “ಒಳಗೆ ಬರಬೇಡಿ, ಇಲ್ಲೇ ಕುಳಿತು ಮಾತನಾಡಿ” ಎಂದು ವಸಂತ್ ಹೇಳುವಷ್ಟರಲ್ಲಿ, ಬಂದಿದ್ದ ಪಾತಕಿಗಳು ಚಾಕುವಿನಿಂದ ಆತನ ಎದೆಗೆ ಚುಚ್ಚಿ ಸಾಯಿಸಿಯೇ ಬಿಟ್ಟರು. ತನ್ನ ಜೀವನದ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡ ಆ ಹೆಣ್ಣುಮಗಳು ಈಗ ಲಕ್ಷಾಂತರ ಸಾಲದ ನಡುವೆ ಬೀದಿಗೆ ಬಿದ್ದಿದ್ದಾಳೆ.

“ಅವರಿಬ್ಬರೂ ಮತ್ತೆ ಬೆಳಕನ್ನು ನೋಡಬಾರದು, ಅಂತಹ ಶಿಕ್ಷೆಯಾಗಲಿ” ಎಂಬ ಆಕೆಯ ಶಾಪ ಇದೆಯಲ್ಲ, ಅದು ಇಡೀ ಸಮಾಜದ ಆಕ್ರೋಶದ ಪ್ರತಿಧ್ವನಿ. ಕಾಮ ಮತ್ತು ಕಾಂಚಾಣದ ಅಮಲಿನಲ್ಲಿ ಒಬ್ಬ ಸಂಸಾರಸ್ಥನ ಕೊಲೆಯಾಗಿದ್ದು ಈ ಕಾಲದ ಅತೀ ದೊಡ್ಡ ದುರಂತ.
