ಬಿಗ್ ಬಾಸ್ ಬೆಡಗಿ, ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಸ್ಟಾರ್ ನಿವೇದಿತಾ ಗೌಡ ಇದೀಗ ಬಾತ್ ರೂಮ್ ಸೆಲ್ಫಿಗಳನ್ನು ಶೇರ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ನಿವೇದಿತಾ ಗೌಡ, ಬ್ರೌನ್ ಕಲರ್ ಡ್ರೆಸ್ ಧರಿಸಿದ್ದು, ಆಕೆಯ ಗೆಳತಿ ಬ್ಲ್ಯಾಕ್ ಡ್ರೆಸ್ ಧರಿಸಿ, ಇಬ್ಬರು ಜೊತೆಯಾಗಿ ಮಿರರ್ ಮುಂದೆ ನಿಂತು ಫೋಟೊ ತೆಗೆದಿದ್ದಾರೆ, ಅಲ್ಲದೇ ಗೆಳತಿ ನಿವೇದಿತಾ ಗೌಡರನ್ನು ಹಲವು ಪೋಸ್ ಗಳಲ್ಲಿ ಕ್ಯಾಪ್ಚರ್ ಮಾಡಿದ್ದಾರೆ. ತಮ್ಮ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾ ಖಾತೆ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ನಿವೇದಿತಾ ಟ್ರೋಲಿಗರಿಗೆ ವಾರ್ನ್ ಮಾಡಿದ್ದಾರೆ.
ಮ್ಮ ಫೋಟೊಗಳ ಜೊತೆಗೆ ನಿವೇದಿತಾ… ನಾನು ಮತ್ತು ನನ್ನ ಬಾತ್ ರೂಮ್ ಸೆಲ್ಫಿಗಳು ನಮ್ಮ ಕೆಲಸವನ್ನು ನಾವು ಮಾಡ್ತಿದ್ದೀವಿ. ಹಾಗೆಯೇ ನೀವು ಕೂಡ ನಿಮ್ಮ ಕೆಲಸ ನೋಡಿ ಎನ್ನುವಂತೆ ಇಂಗ್ಲಿಷ್ ನಲ್ಲಿ ಬರೆದುಕೊಂಡಿದ್ದಾರೆ ( Me and my bathroom selfies minding our own business.. you should too…). ಟ್ರೋಲಿಗರು ಕೆಟ್ಟ ಕೆಟ್ಟ ಕಾಮೆಂಟ್ ಮಾಡುವ ಮೂಲಕ ನಿವೇದಿತಾ ವಿರುದ್ಧ ಕಿಡಿ ಕಾರಿದ್ದಾರೆ.
ಬಾತ್ ರೂಮಿನಲ್ಲಿ ಫೋಕಸ್ ಲೈಟ್ ಚೆನ್ನಾಗಿರೋದರಿಂದ ನಿವೇದಿತಾ ತಮ್ಮ ಹೆಚ್ಚಿನ ಫೋಟೊಗಳನ್ನು ಬಾತ್ ರೂಮಿನಲ್ಲಿ ತೆಗೆದುಕೊಳ್ಳುತ್ತಾರೆ. ಆದರೆ ಆ ವಿಷ್ಯದಿಂದಲೇ ನಿವೇದಿತಾ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿದ್ದು, ಈಗಲೂ ಟ್ರೋಲಿಗೊಳಗಾಗಿದ್ದಾರೆ.