ಮಂಗಳೂರು: ಪತ್ರಕರ್ತರದ್ದೇ ಸುದ್ದಿಯನ್ನು ಹೊಂದಿರುವ ಮಂಗಳೂರು ಪ್ರೆಸ್‌ಕ್ಲಬ್‌ನ ಗೃಹ ಪತ್ರಿಕೆ ʻಪ್ರೆಸ್ ಕ್ಲಬ್ ಮಂಗಳೂರು ಸಮಾಚಾರ ʼ ಇದರ ಈ ವರ್ಷದ ಪ್ರಥಮ ಸಂಚಿಕೆಯನ್ನು ಖ್ಯಾತ ಚಿತ್ರ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿದರು.
ಸಂಗೀತಕ್ಕ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಾಗ ಕೈ ಬೂಸಿ ಕರೆದಿದ್ದು ಮಂಗಳೂರು. ಆರ್ಕೆಸ್ಟ್ರಾ ಮೂಲಕ ಜೀವನ ರೂಪಿಸಿದ್ದು, ಕೀಬೋರ್ಡ್ ಖರೀದಿಸಿದ್ದು ಇಲ್ಲಿಯೇ. ಮಂಗಳೂರಿನ ಸಂಬಂಧ ಅವಿನಾಭಾವವಾಗಿದೆ. ಈ ಪತ್ರಿಕೆಯ ಲೋಕಾರ್ಪಣೆಗೆ ಕರೆದಿದ್ದು ನನ್ನ ಪುಣ್ಯ. ಎಲೆಮರೆಯಲ್ಲಿರುವ ಸಾಧಕರನ್ನು ತರುವ ಕೆಲಸ ನಿಮ್ಮಿಂದಾಗಲಿ ಎಂದು ಹಾರೈಸಿದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್‌ಕ್ಲಬ್ ನ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ, ಕಾರ್ಯದರ್ಶಿ ಪುಷ್ಪರಾಜ್.ಬಿ.ಎನ್. ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ