ಪಾಕಿಸ್ತಾನಕ್ಕೆ ಎರಗಲು ಸಜ್ಜಾಗಿ ನಿಂತ 18 ರಫೇಲ್‌ ಯುದ್ಧ ವಿಮಾನಗಳು!

ಪಹಲ್ಗಾಂ ಅಮಾನುಷ ಕೃತ್ಯದ ಬಳಿಕ ಭಾರತ ಪಾಕಿಸ್ತಾನದ ಮೇಲೆ ಮುಟ್ಟಿನೋಡಿಕೊಳ್ಳುವಂತ ಪ್ರತಿಕ್ರಿಯೆ ನೀಡಬೇಕೆಂಬ ಒಕ್ಕೊರಲ ಆಗ್ರಹಗಳ ನಡುವೆಯೇ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ರಫೇಲ್‌ ಯುದ್ಧ ವಿಮಾನಗಳು ಸಜ್ಜಾಗಿಟ್ಟಿದೆ. 36 ರಫೇಲ್‌ ಯುದ್ಧ ವಿಮಾನಗಳ ಪೈಕಿ 18 ಪಾಕಿಸ್ತಾನಕ್ಕೆ ಮುಖ ಮಾಡಿ ಭಾರತದ ಗಡಿ ಭಾಗಗಳಲ್ಲಿ ನಿಯೋಜಿಸಲಾಗಿದೆ.

Pulwama to Pahalgam: Rafale jets with Scalp missiles give India edge over 2019 Balakot strike

ಆದರೆ ಈ ಬಾರಿಯ ಯುದ್ಧ ಹಿಂದಿನಂತಿರುವುದಿಲ್ಲ ಎನ್ನುವುದು ಗಮನಾರ್ಹ. ಭಾರತವು ಈ ಹಿಂದೆ ಗಡಿಯಾಚೆಗಿನ ಭಯೋತ್ಪಾದಕರು ನಡೆಸಿದ್ದ ಕೃತ್ಯಗಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌ ನಂತಹ ದಾಳಿ ನಡೆಸಿತ್ತು. ಆದರೆ ಈ ಬಾರಿಯ ಪ್ರತೀಕಾರ ತೀರಾ ಭಿನ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

2015 ರಲ್ಲಿ ಮಣಿಪುರದಲ್ಲಿ ನಡೆದ ದಾಳಿಗೆ ಭಾರತವು ಮ್ಯಾನ್ಮಾರ್‌ನಲ್ಲಿ ದಂಗೆಕೋರರ ಶಿಬಿರಗಳ ಮೇಲೆ ದಾಳಿ ಮಾಡಿತ್ತು. 2016 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ದಾಳಿಗೆ ಭಾರತವು ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರತಿಕ್ರಿಯಿಸಿತು. 2019 ರಲ್ಲಿ, ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿಯನ್ನು ನಡೆಸಿತು. ಹಾಗಾದರೆ 2025ರ ಪಹಲ್ಗಾಂ ದಾಳಿಗೆ ಭಾರತ ಪ್ರತಿಕ್ರಿಯೆ ಹೇಗಿರಬಹುದು?

2019ರ ದಾಳಿಯ ಸಂದರ್ಭ ಭಾರತ ತನ್ನ ಬತ್ತಳಿಕೆಯಿಂದ ಯಾವುದೇ ವಿಮಾನಗಳನ್ನು ಬಳಸಿರಲಿಲ್ಲ. ಅತ್ಯಾಧುನಿ ಯುದ್ಧ ವಿಮಾನಗಳ ಬದಲು ಭಾರತವು ಹಳೆಯ ಯುದ್ಧ ವಿಮಾನಗಳಾದ ಮಿರಾಜ್ 2000 ಮತ್ತು ಮಿಗ್ -21 ಗಳನ್ನು ಬಳಸಿತ್ತು. ವಿಶೇಷವೆಂದರೆ ಭಾರತವು MiG-21 ವಿಮಾನದ ಮೂಲಕ ಪಾಕಿಸ್ತಾನದ ಅತ್ಯಾಧುನಿಕ, ಅಮೆರಿಕಾ ನಿರ್ಮಿತ F-16 ಅನ್ನು ಹೊಡೆದುರುಳಿಸಿತ್ತು.

ಪಾಕಿಸ್ತಾನದ ಬತ್ತಳಿಕೆಯಲ್ಲೂ ಸಾಕಷ್ಟು ಸುಧಾರಿತ ಯುದ್ಧ ವಿಮಾನಗಳಿವೆ. ಭಾರತವೂ ತನ್ನ ಶಸ್ತ್ರ ಭಂಡಾರಗಳಲ್ಲಿ ಸಾಕಷ್ಟ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಸಂಗ್ರಹಿಸಿಟ್ಟುಕೊಂಡಿದೆ. ಇಂತಹ ಸಂರ್ಭದಲ್ಲಿ ಇದೀಗ ರಫೇಲ್‌ ಯುದ್ಧ ವಿಮಾನಗಳನ್ನು ಹೊರತೆಗೆಯಲಾಗಿದೆ. ಕ್ಷಿಪಣಿಗಳಿಂದ ಲೋಡ್‌ ಆಗಿರುವ ರಫೇಲ್‌ ಯುದ್ಧ ವಿಮಾನಗಳನ್ನು ದೇಶದ 18 ಭಾಗಗಳಲ್ಲಿ ನಿಯೋಜಿಸಲಾಗಿದೆ. ಇದು ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಇದಕ್ಕೆ ಸಾಟಿಯಾದ ವಿಮಾನಗಳು ಪಾಕಿಸ್ತಾನದಲ್ಲಿ ಇಲ್ಲ ಎನ್ನುವುದು ಗಮನಾರ್ಹ

ಭಾರತದ ಮಿರಾಜ್‌ ಮತ್ತು ಸುಖೋಯ್‌ಗ ಹೋಲಿಸಿದರೆ, ಮತ್ತು ಪಾಕಿಸ್ತಾನದ ಪ್ರಮುಖ F-16 ಗೆ ಹೋಲಿಸಿದರೆ, ಫ್ರೆಂಚ್ ರಫೇಲ್‌ಗಳು ಉತ್ತಮವಾಗಿವೆ. ಅವು ಉತ್ತಮ ವ್ಯಾಪ್ತಿಯನ್ನು ಹೊಂದಿರುವ ಸ್ಕಾಲ್ಪ್ ಮತ್ತು ಉಲ್ಕಾ ಕ್ಷಿಪಣಿಗಳನ್ನು ಹೊಂದಿವೆ. ಹೊಸ ರಾಡಾರ್‌ಗಳು ಮತ್ತು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳೊಂದಿಗೆ, ತುಂಬಿರುವ ರಫೇಲ್‌ಗಳು ವೈಮಾನಿಕ ಯುದ್ಧದಲ್ಲಿ ಭಾರತದ ಮುಂಚೂಣಿ ಸ್ಥಾನವನ್ನು ವಹಿಸುತ್ತದೆ.

ಫ್ರಾನ್ಸ್‌ನಿಂದ ಭಾರತ ಖರೀದಿಸಿರುವ 36 ರಫೇಲ್‌ಗಳಲ್ಲಿ 18 ರಫೇಲ್‌ಗಳನ್ನು ಹರಿಯಾಣದ ಅಂಬಾಲ ಎಂಬಲ್ಲಿ ಪಶ್ಚಿಮ ಭಾಗದಲ್ಲಿ ಪಾಕಿಸ್ತಾನ ಮೇಲೆ ಎರಗಲು ಸಜ್ಜಾಗಿ ನಿಂತಿದೆ. ಅಗತ್ಯವಿದ್ದರೆ ಭಾರತವು ಪೂರ್ವ ವಲಯಕ್ಕೂ ಅದನ್ನು ತಿರುಗಿಸಬಹುದು. ಇದೇ ರಫೇಲ್‌ಗಳನ್ನು ಪಶ್ಚಿಮ ಮುಂಭಾಗಕ್ಕೂ ಸ್ಥಳಾಂತರಿಸಬಹುದು.

 

error: Content is protected !!