ಮಂಗಳೂರು : ಮಂಗಳೂರಿನ ಬಿಜೈ ಎಂಬಲ್ಲಿ ಸುಗಂಧ ದ್ರವ್ಯ ಪರಿಮಳ ಮೀರಿದ್ದು, ಕೇರಳ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಿದೇಶದಿಂದ ವಿದೇಶದಿಂದ ಅಕ್ರಮವಾಗಿ ಸುಗಂಧ ದ್ರವ್ಯಗಳನ್ನು ಮಂಗಳೂರಿಗೆ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಕೇರಳ ಪೊಲೀಸರಿಗೆ ಲಭಿಸಿತ್ತು. ಪೊಲೀಸರು ದಾಳಿ ನಡೆಸಲು ಕಾರಣವೂ ಇದೆ. ಯಾಕೆಂದರೆ ಈ ಸುಗಂಧ ದ್ರವ್ಯಗಳನ್ನು ಕೇರಳ ಮೂಲದವರು ದುಬೈಯಿಂದ ಅಕ್ರಮವಾಗಿ ತರಿಸಿದ್ದು, ಇದನ್ನು ಮಂಗಳೂರಿನ ಬಿಜೆಪಿ ಸಮೀಪ ಮಾರಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ದಾಳಿಯ ವೇಳೆ ಬಿಜೈ ಸರಕಾರಿ ಬಸ್ ನಿಲ್ದಾಣದಲ್ಲಿ ಮೂರು ಬಾಕ್ಸ್‌ಗಳಲ್ಲಿದ್ದ ಸುಗಂಧ ದ್ರವ್ಯಗಳನ್ಮು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನು ದುಬೈನಿಂದ ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ದಾಖಲಾತಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದನ್ನು ಇಲ್ಲಿ ತಂದಿಟ್ಟವರಿಗಾಗಿ ಪೊಲೀಸರು ಶೋಧ ನಡೆಸಿದ್ದಾಗಿ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಕೇರಳ ಪೊಲೀಸರಿಗೆ ಮಂಗಳೂರಿನ ಪೊಲೀಸರೂ ಕೂಡ ಸಾಥ್ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಸುಗಂಧ ಆರೋಪಿಗಳೊಂದಿಗೆ ಡ್ರಗ್ ಪೆಡ್ಲರ್‌ಗಳೂ ಇದ್ದಾರೆ ಎನ್ನಲಾಗುತ್ತಿದೆ.