ಪಹಲ್ಗಾಂ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡ ಪತ್ತೆ: ಇದಕ್ಕೆ ಸಿಕ್ಕ ಸಾಕ್ಷಿ ಏನು ಗೊತ್ತಾ?

ನವದೆಹಲಿ: ಏಪ್ರಿಲ್ 22 ರಂದು, ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ 26 ಮಂದಿ ಪ್ರವಾಸಿಗರನ್ನು ಉಗ್ರರು ಕೊಂದು ಹಾಕಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ, ಇದರಲ್ಲಿ ನಮ್ಮ ಕೈವಾಡವಿಲ್ಲ. ಇದು ಭಯೋತ್ಪಾದಕ ಕೃತ್ಯ ಎಂದು ಹೇಳಿತ್ತು. ಆದರೆ ಇದೀಗ ಈ ದಾಳಿಯಲ್ಲಿ ಪಾಕಿಸ್ತಾನ ನೇರವಾಗಿ ಶಾಮಿಲಾಗಿರುವುದು ಬಯಲಾಗಿದೆ. ಪ್ರವಾಸಿಗರು ಮೋಜಿ, ಮಸ್ತಿಯಲ್ಲಿ ತಲ್ಲೀನರಾಗಿದ್ದಾಗ ಭಯೋತ್ಪಾದಕರು ಸೇನಾ ಸಮವಸ್ತ್ರ ಧರಿಸಿ, ದಟ್ಟವಾದ ಕಾಡಿನಿಂದ ಹೊರಬಂದು, ಕಣಿವೆಯನ್ನು ಸುತ್ತುವರೆದು ಪ್ರವಾಸಿಗರನ್ನು ಒಬ್ಬೊಬ್ಬರಾಗಿ ಕೊಲ್ಲಲು ಪ್ರಾರಂಭಿಸಿದರು. 15 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆದ ದಾಳಿಯ ಕೊನೆಯಲ್ಲಿ 26 ಜನರು ಸಾವನ್ನಪ್ಪಿದರು.

M4 Carbine | Military.com
ವಿಶೇಷವೆಂದರೆ ಉಗ್ರರು ಪ್ರವಾಸಿಗರನ್ನು ಕೊಲ್ಲಲು ಬಳಸಿದ್ದು ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರ ಬಳಸಿರುವುದು ಬಯಲಾಗಿದೆ. US-ನಿರ್ಮಿತ AK-47 ಮತ್ತು US-ನಿರ್ಮಿತ M4 ಕಾರ್ಬೈನ್‌ ಎಂಬ ಅತ್ಯಾಧುನಿಕ ಶಸ್ತ್ರಾಸ್ತ್ರ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ.
ಭದ್ರತಾ ತಜ್ಞರ ಪ್ರಕಾರ, ಈ ಶಸ್ತ್ರಗಳು ಅಮೆರಿಕದಲ್ಲಿ ಮಾತ್ರ ತಯಾರಾಗುತ್ತಿದೆ.

Kalashnikov group welcomes plans to produce AK-47 rifles in US - Russia - TASS

ಕಣಿವೆಯಲ್ಲಿ ಇತ್ತೀಚಿನ ಹಾಗೂ ಹಿಂದಿನ ದಾಳಿಗಳಲ್ಲಿಯೂ ಸಹ, ಪಾಕಿಸ್ತಾನ ಮೂಲದ ಭಯೋತ್ಪಾದಕರು M4 ಕಾರ್ಬೈನ್‌ಗಳನ್ನು ಬಳಸಿದ್ದಾರೆ. ಉತ್ತರಿಸಬೇಕಾದ ಪ್ರಶ್ನೆಯೆಂದರೆ – ಪಾಕಿಸ್ತಾನಿ ಭಯೋತ್ಪಾದಕರು ಅಮೆರಿಕನ್ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆಯುತ್ತಾರೆ? ಎನ್ನುವುದು ಇಲ್ಲಿರುವ ಕುತೂಹಲಕಾರಿ ಅಂಶವಾಗಿದೆ. ಅಮೆರಿಕಾ ಯಾವುದೇ ಭಯೋತ್ಪಾದಕ ಸಂಘಟನೆಗಳಿಗೆ ತಮ್ಮ ದೇಶದ ಶಸ್ತ್ರಗಳನ್ನು ಮಾರುವುದಿಲ್ಲ ಅಂದರೆ ರಫ್ತು ಮಾಡುವುದಿಲ್ಲ. ಶಸ್ತ್ರಾಸ್ತ್ರಗಳ ಪೂರೈಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತ್ರ ನಡೆಯುತ್ತದೆ. ಪ್ರಸ್ತುತ ಪಾಕಿಸ್ತಾನವು ಅಮೆರಿಕಾದಿಂದ ಸಾಕಷ್ಟು ಶಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತದೆ.

ಇದನ್ನು ಸೇನೆ ತಮ್ಮ ದೇಶದ ರಕ್ಷಣೆಗೆ ಬಳಸಬೇಕೆಂಬ ನಿಯಮವಿರುತ್ತದೆ. ಆದರೆ ಪಾಕಿಸ್ತಾನ ಹೀಗೆ ಆಮದಾದ ಶಸ್ತ್ರಗಳನ್ನು ಭಯೋತ್ಪಾಕರಿಗೆ ಪೂರೈಕೆ ಮಾಡುತ್ತಿರುವುದು ಮೊನ್ನೆಯ ದಾಳಿಯಿಂದ ಬಯಲಾದಂತಾಗಿದೆ. ಹೀಗಾಗಿ ಮೊನ್ನೆಯ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡ ಇರುವುದುವು ಪತ್ತೆಯಾಗಿದ್ದು, ಈ ಯುದ್ಧ ಪರಿಕರಗಳೇ ಇದಕ್ಕೆ ಸಾಕ್ಷಿ ಎನ್ನುವುದು ಇದೀಗ ಬಂದಿರುವ ಮಾಹಿತಿ. ಇದನ್ನು ಆಧರಿಸಿ ಭಾರತ ಪಾಕಿಸ್ತಾನದ ವಿರುದ್ಧ ದೊಡ್ಡ ಮಟ್ಟದಲ್ಲಿ ಕ್ರಮ ಜರುಗಿಸಬಹುದೆಂಬ ಮಾತುಗಳು ಕೇಳಿಬರುತ್ತಿದೆ.

error: Content is protected !!