ಟಿಕೆಟ್‌ ರಹಿತ ಪ್ರಯಾಣಕ್ಕೆ 2.53 ಕೋಟಿ ರೂ. ದಂಡ ವಸೂಲಿ

ಉಡುಪಿ: ಕೊಂಕಣ ರೈಲ್ವೇ ನಿಗಮದಿಂದ ಟಿಕೆಟ್‌ ರಹಿತ ಮತ್ತು ಅನಧಿಕೃತ ಪ್ರಯಾಣವನ್ನು ತಡೆಯಲು ತೀವ್ರ ಹಾಗೂ ನಿರಂತರ ಟಿಕೆಟ್‌ ಪರಿಶೀಲನ ಅಭಿಯಾನ ನಡೆಸುತ್ತಿದ್ದು, ಜನವರಿ ತಿಂಗಳಲ್ಲಿ 1,014 ಕಡೆ ವಿಶೇಷ ಟಿಕೆಟ್‌ ಪರಿಶೀಲನೆ ನಡೆಸಿ 44,736 ಅನಧಿಕೃತ/ಅಕ್ರಮ ಪ್ರಯಾಣಿಕರನ್ನು ಪತ್ತೆಹಚ್ಚಿದ್ದು ಇವರಿಂದ 2.53 ಕೋಟಿ ರೂ. ದಂಡ ವಸೂಲಿ ಮಾಡಿದೆ.

2025ರ ಡಿಸೆಂಬರ್‌ವರೆಗೆ 9,495 ಕಡೆ ಪರಿಶೀಲನೆ ನಡೆಸಿ 4,13,637 ಅನಧಿಕೃತ/ಅಕ್ರಮ ಪ್ರಯಾಣಿಕರನ್ನು ಪತ್ತೆಹಚ್ಚಿ 22.81 ಕೋ. ರೂ. ದಂಡ ವಸೂಲಿ ಮಾಡಲಾಗಿತ್ತು.

ಈ ವಿಶೇಷ ಕಾರ್ಯಾಚರಣೆಯನ್ನು ರೈಲು ರಕ್ಷಣ ಪಡೆಯ (ಆರ್‌ಪಿಎಫ್‌) ಸಿಬಂದಿ ಮತ್ತು ರೈಲ್ವೇ ಅಧಿಕಾರಿಗಳ ಸಹಕಾರದಲ್ಲಿ ಕೊಂಕಣ ರೈಲ್ವೇ ವ್ಯಾಪ್ತಿಯ ಎಲ್ಲ ರೈಲು ಮತ್ತು ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ. ಈ ಮೂಲಕ ಪ್ರಯಾಣಿಕರ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

error: Content is protected !!