ನಮ್ಮ ಸರ್ಕಾರ ಬಂದರೆ ಪ್ರತಿಯೊಬ್ಬ ಹಿಂದೂಗಳ ಶಿರಚ್ಛೇದ ಮಾಡುತ್ತೇವೆ: ಬೆದರಿಕೆ ಹಾಕಿದ ಚೋಟಿ ಕಟ್ಟಾ ಯಾರು?

ಲಕ್ನೋ: ನಮ್ಮ ಸರ್ಕಾರ ಬಂದರೆ, ಹಿಂದೂ ಮನೆಗಳಲ್ಲಿ ಒಬ್ಬನೂ ಉಳಿಯುವುದಿಲ್ಲ, ಹಿಂದೂಗಳ ಶಿರಚ್ಛೇದ ಮಾಡುತ್ತೇವೆ ಎಂದು ಮೊಯಿನ್ ಸಿದ್ದಿಕಿ ಅಲಿಯಾಸ್ ಚೋಟಿ ಕಟ್ವಾ ಬೆದರಿಕೆ ಹಾಕಿದ್ದಾನೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಈತ ಬೆದರಿಕೆ ಹಾಕಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಮೊಯಿನ್ ಸಿದ್ದಿಕಿ ಉತ್ತರ ಪ್ರದೇಶದ ಬರೇಲಿಯವನಾಗಿದ್ದು, ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಲ್ಲಿ ಗುರುತಿಸಿಕೊಂಡಿದ್ದಾನೆ. ಅಲ್ಲದೆ ಕಟ್ಟರ್‌ ಮುಸ್ಲಿಂ ಐಎಂಸಿ ಪಕ್ಷದ ನಾಯಕನೂ ಹೌದು. ಮೊಯಿನ್ ಸಿದ್ದಿಕಿಯ ಬೆದರಿಕೆಯಿಂದ ಸ್ಥಳೀಯ ಹಿಂದೂಗಳು ಭಯಭೀತರಾಗಿದ್ದು, ಚೋಟಿಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಹಿಂದೂ ಮಹಿಳೆಯೊಬ್ಬರ ಮಗನ ಶಿರಚ್ಛೇದ ಮಾಡುವುದಾಗಿ ಐಎಂಸಿ ನಾಯಕ ಮೊಯಿನ್ ಸಿದ್ದಿಕಿ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದೂ, ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಆತ ಸರ್ಕಾರ ಬದಲಾದ ನಂತರ, ಹಿಂದೂಗಳ ಮನೆಗಳಿಗೆ ನುಗ್ಗಿ ಅವರನ್ನು ಕೊಲ್ಲುತ್ತೇನೆ ಎಂದು ಮೊಯಿನ್ ಬೆದರಿಕೆ ಹಾಕಿದ್ದಾನೆ.

ಲೋಧಿ ಟೋಲಾದ ನಿವಾಸಿ ಮಾಯಾ ದೇವಿ ಮಾತನಾಡಿ, ತಮ್ಮ ಮನೆಯ ಬಳಿ ಒಂದು ಪುರಾತನ ಬಾವಿ ಇದೆ. ಈ ಕಾಲೋನಿಯ ಎಲ್ಲಾ ಹಿಂದೂಗಳು ಈ ಬಾವಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಐಎಂಸಿ ನಾಯಕ ಮೊಯಿನ್ ಸಿದ್ದಿಕಿ ಮತ್ತು ಕೆಲವು ಜನರು ಇದನ್ನು ವಿರೋಧಿಸುತ್ತಿದ್ದಾರೆ. ನನ್ನ ಮಗ ಜಿತು ಈ ವಿಷಯದ ಬಗ್ಗೆ ನಗರಸಭೆಗೆ ಹಲವು ಬಾರಿ ದೂರು ನೀಡಿದ್ದ. ಈ ದೂರಿನ ಬಗ್ಗೆ ಮೊಯಿನ್ ಸಿದ್ದಿಕಿ ದ್ವೇಷ ಕಾರುತ್ತಿದ್ದನು. ಇದಕ್ಕಾಗಿ ತನ್ನನ್ನು ಸುತ್ತುವರಿದು, ನನಗೆ ಬೆದರಿಕೆ ಹಾಕಿ, ಒಂದಲ್ಲಾ ಒಂದು ದಿನ ನಾನು ನಿನ್ನ ಮಗನ ತಲೆಯನ್ನು ಕತ್ತರಿಸಿ ನೇತು ಹಾಕುತ್ತೇನೆ ಎಂದು ಹೇಳಿದ್ದಾಗಿ ಮಾಯಾ ದೇವಿ ಆರೋಪಿಸಿದ್ದಾರೆ.

ಮಹಿಳೆಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬರಾದರಿ ಪೊಲೀಸ್ ಠಾಣೆಯ ಉಸ್ತುವಾರಿ ಧನಂಜಯ್ ಪಾಂಡೆ ತಿಳಿಸಿದ್ದಾರೆ.

error: Content is protected !!