ಗಡಿ ದಾಟಿದ ಬಿಎಸ್ಸೆಫ್ ಯೋಧನನ್ನು ಬಂಧಿಸಿದ ಪಾಕ್ ಸೇನೆ!

ದೆಹಲಿ: ಪಂಜಾಬ್‌ ಬಳಿ ಆಕಸ್ಮಿಕವಾಗಿ ಗಡಿ ದಾಟಿದ ಗಡಿ ಭದ್ರತಾ ಪಡೆ ಯೋಧನನ್ನು ಪಾಕಿಸ್ತಾನಿ ಸೇನೆ ಬಂಧಿಸಿದ್ದು ಬಿಡುಗಡೆಗೆ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ.

182ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಪಿ.ಕೆ. ಸಿಂಗ್ ಬಂಧಿತ ಯೋಧ. ಫಿರೋಜ್‌ಪುರ್ ಗಡಿ ಬಳಿ ಬುಧವಾರ ಇವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿತ್ತು. ಸಿಂಗ್ ಸೇನಾ ಸಮವಸ್ತ್ರ ಧರಿಸಿದ್ದರು ಹಾಗೂ ಸೇವಾ ಬಂದೂಕು ಹೊಂದಿದ್ದರು. ರೈತರೊಂದಿಗೆ ಇದ್ದ ಇವರು, ವಿಶ್ರಾಂತಿಗಾಗಿ ನೆರಳು ಅರಸಿ ಹೊರಟಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ ಸಿಂಗ್ ಅವರನ್ನು ಪಾಕಿಸ್ತಾನಿ ಸೇನೆ ವಶಕ್ಕೆ ಪಡೆದಿದೆ ಎಂದು ಮೂಲಗಳು ಹೇಳಿವೆ.

error: Content is protected !!