ದೇಶ ವಿದೇಶಗಳಲ್ಲಿ ಪ್ರಧಾನಿ ಮೋದಿ ತೇಜೋವಧೆ; ಕಾಂಗ್ರೆಸ್ ವಿರುದ್ಧ ಮಂಗಳೂರು ಮಹಿಳಾ ಮೋರ್ಚಾ ಆಕ್ರೋಶ

ಮಂಗಳೂರು: ಮಂಗಳೂರು ಉತ್ತರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಪಕ್ಷ ವಿವಿಧ ರೀತಿಯಲ್ಲಿ ದೇಶ ವಿದೇಶಗಳಲ್ಲಿ ತೇಜೋವಧೆ ಮಾಡಿ ಅವಮಾನಿಸುತ್ತಿರುವುದನ್ನು ಖಂಡಿಸಿ ಮಂಗಳೂರು ತಹಸೀಲ್ದಾರರ ಮೂಲಕ ರಾಜ್ಯ ಪಾಲರಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಮಂಡಲ ಮಹಿಳಾ ಮೋರ್ಚಾದ ಉಪಾಧ್ಯಕ್ಷರುಗಳಾದ ಸುಲತಾ ಪೂಜಾರಿ , ಪ್ರಮೀಳಾ ಕೋಟ್ಯಾನ್, ಜಯಲಕ್ಷ್ಮಿ ನವೀನ್, ಪ್ರಧಾನ ಕಾರ್ಯದರ್ಶಿ ಗಳಾದ ಸಪ್ನ ಸುನೀಲ್, ಪವಿತ್ರ ನಿರಂಜನ್ , ಸದಸ್ಯರಾದ ಸರೋಜಿನಿ ಉಪಸ್ಥಿತರಿದ್ದರು

error: Content is protected !!