ಮಂಗಳೂರು: ಮಂಗಳೂರು ನಗರದಲ್ಲಿ ಅಲ್ಲಲ್ಲಿ ಗಟಾರದ ನೀರು ಹೊರಬರುತ್ತಿದ್ದು, ಮೂಗು ಮುಚ್ಚುವಂತಾಗಿದೆ.
ಮಲ್ಲಿಕಟ್ಟೆ ಸಮೀಪದ ರಸ್ತೆಯಲ್ಲಿ ಕೆಲವು ದಿನಗಳಿಂದ ಗಟಾರದ ನೀರು ಹೊರಬರುತ್ತಿದ್ದು, ವಾಸನೆ ಮೂಗಿಗೆ ಬಡಿಯುತ್ತಿದೆ. ಕೊಂಚ ಮುಂದೆ ಬಂದರೆ ಕದ್ರಿ ಸರ್ಕಲ್‌ನಿಂದ ಬೆಂದೂರ್‌ವೆಲ್‌ಗೆ ಹೋದ ರಸ್ತೆಯಲ್ಲಿಯೂ ಗಟಾರ ಭತ್ರಿಯಾಗಿ ನೀರು ಹೊರಬಂದು ಜನರ ಮೇಲೆ ಪ್ರೋಕ್ಷಣೆಯಾಗುತ್ತಿದೆ. ಕೆಲವೊಮ್ಮೆ ಕೆಪಿಟಿಯಿಂದ ಬಿಜೈಗೆ ಹೋಗುವ ರಸ್ತೆಯಲ್ಲಿಯೂ ಆಗಾಗ ಚರಂಡಿ ನೀರು ಹೊರಬರುತ್ತೇ ಇದ್ದು ಊರೆಲ್ಲಾ ವಾಸನೆ ಬರುತ್ತಲೇ ಇದೆ.
ಕೆಲವು ಕಡೆಗಳಲ್ಲಿ ರಸ್ತೆಯನ್ನು ಅಗೆಯಲಾಗುತ್ತಿರುವುದರಿಂದಲೂ ಗಟಾರದ ನೀರು ಹೊರಬರುತ್ತಿದೆ. ಗಟಾರದ ನೀರು ಹೊರಬರದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.