ಶ್ರೀನಗರ: ಜಮ್ಮು ಕಾಶ್ಮೀರದ ಇಂದು ಉಧಂಪೂರ್ ಬಳಿ ಭದ್ರತಾ ಪಡೆಗಳು ಮತ್ತು ಉಗ್ರರ ಗುಂಪಿನ ನಡುವೆ ಘರ್ಷಣೆ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗಳ ಮೇಲೆ ಉಗ್ರರ ದಾಳಿಯಾದ ಎರಡು ದಿನಗಳ ನಂತರ ಇಂದು ಬೆಳಿಗ್ಗೆ ಈ ಘರ್ಷಣೆ ಶುರುವಾಗಿದೆ. ಭಾರತೀಯ ಸೇನೆಯು ಖಚಿತಪಡಿಸಿದಂತೆ ಈ ಗುಂಡುಕಾಳಗದಲ್ಲಿ ಒಬ್ಬ ಸೈನಿಕ ಹುತಾತ್ಮನಾಗಿದ್ದಾರೆ. ಭದ್ರತಾ ಪಡೆಗಳು ಹಲವಾರು ದಿನಗಳಿಂದ ನಡೆಸುತ್ತಿದ್ದ ಶೋಧಾ ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರರೊಂದಿಗೆ ಸಂಪರ್ಕ ಸಾಧಿಸಿದ ನಂತರ ಉಧಂಪೂರ್ ಬಳಿ ಈ ಘರ್ಷಣೆ ಪ್ರಾರಂಭವಾಗಿದೆ.
ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ” ಈ ಪ್ರದೇಶದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಬಂದ ನಂತರ ಶೋಧಾ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಶೋಧಾ ತಂಡಗಳು ಬೆರೋಲೆ ಪ್ರದೇಶವನ್ನು ತಲುಪಿದಾಗ ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದರು. ಭಾರತೀಯ ಸೇನೆ ಪ್ರತಿದಾಳಿಯನ್ನು ಆರಂಭಿಸಿದೆ.