ಬೆಂಗಳೂರು: ಕೋಟ್ಯಧಿಪತಿ ಮಂಗಳಮುಖಿ ತನುಶ್ರೀ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಲವು ಮಹತ್ವದ ಸುಳಿವುಗಳು ಲಭಿಸಲರಾರಂಭಿಸಿದೆ. ಮೂರು ದಿನಗಳ ಹಿಂದೆ ಕೆ.ಆರ್. ಪುರ ಠಾಣೆ ವ್ಯಾಪ್ತಿಯಲ್ಲಿ ಕೆ.ಆರ್.ಪುರದ ಸೀಗೆಹಳ್ಳಿ ನಿವಾಸಿ ತನುಶ್ರೀ ಅಲಿಯಾಸ್ ನವೀನ್ (45) ಹ*ತ್ಯೆಯಾಗಿತ್ತು.
ಈಕೆಯನ್ನು ಈಕೆಯ ಗಂಡ, ಮೊದಲು ಸ್ನೇಹಿತನಾಗಿದ್ದ ಜಗದೀಶ್ ಈಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕುರಿತು ಪೊಲೀಸರಿಗೆ ಅನುಮಾನ ಮೂಡಿದ್ದು, ಆತನಿಗಾಗಿ ತೀವ್ರತ ಶೋಧ ನಡೆಸುತ್ತಿದ್ದಾರೆ.
ಕೆ.ಆರ್.ಪುರದ ಸೀಗೆಹಳ್ಳಿಯ ಮನೆಯಲ್ಲಿ ಸ್ನೇಹಿತ ಜಗದೀಶ್ ಮತ್ತು ತನುಶ್ರೀ ವಾಸವಾಗಿದ್ದರು. ಮೂರು ದಿನಗಳ ಹಿಂದೆ ಯಾವುದೋ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಜಗದೀಶ್, ತನುಶ್ರೀಯನ್ನು ಹ*ತ್ಯೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿ ಯಾಗಿರಬಹುದೆಂದು ಶಂಕಿಸಲಾಗಿದೆ.
ತೃತೀಯ ಲಿಂಗಿಗಳ ಸಂಘಟನೆ ಯವರು ತನುಶ್ರೀ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದ್ದು, ಫೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಮನೆಗೆ ಬಂದಿದ್ದರು. ಮನೆಯ ಬೀಗ ಒಡೆದು ನೋಡಿದಾಗ ತನುಶ್ರೀ ಹ*ತ್ಯೆಗೀಡಾಗಿದ್ದು, ಕಂಡುಬಂದಿದ್ದು, ಮೃತದೇಹ ಕೊಳೆತಿತ್ತು. .ಆರ್.ಪುರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಹಣ ಚಿನ್ನಾಭರಣ ದರೋಡೆ?
ಕ್ಯಾಬ್ ಚಾಲಕನಾಗಿರುವ ಜಗದೀಶ್ಗೆ 2024ರ ಸೆಪ್ಟೆಂಬರ್‌ನಲ್ಲಿ ತನುಶ್ರೀ ಪರಿಚಯವಾಗಿದ್ದು, ಈಕೆಯಲ್ಲಿ ಅಪಾರ ಆಸ್ತಿ ಹಣ ಕಂಡು ಬೆರಗಾಗಿದ್ದ. ಇದಕ್ಕಾಗಿಯೇ ಆತ ತನುಶ್ರೀ ತೃತೀಯಲಿಂಗಿ ಎಂದು ಗೊತ್ತಿದ್ದರೂ ಕೆಲ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಕೆಲವು ದಿನಗಳಿಂದಲೂ ತನುಶ್ರೀ ಮನೆಯಲ್ಲಿಯೇ ಝಂಡಾ ಊರಿದ್ದ ಜಗದೀಶತನುಶ್ರೀಯನ್ನು ಕೊಲೆಗೈದು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಬಗ್ಗೆ ಬಗ್ಗೆ ಶಂಕೆ ವ್ಯಕ್ತವಾಗಿದೆ. ಜಗದೀಶನಿಗೆ ಹಿಂದೆಯೂ ಒಂದು ಮದುವೆಯಾಗಿದ್ದು, ಆಕೆಗೆ ಕೈ ಕೊಟ್ಟಿದ್ದಾನೆ ಎಂದು ಹೇಳಲಾಗಿದೆ.
ಕೋಟ್ಯಧಿಪತಿಯಾಗಿದ್ದ ತನುಶ್ರೀ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆಯಾಗಿದ್ದಷ್ಟೇ ಅಲ್ಲದೆ ಸಂಗಮ ಎಂಬ ಎನ್‌ಜಿಓ ನಡೆಸಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಘಟನಾ ಸ್ಥಳದಲ್ಲಿ ನೂರಾರು ತೃತೀಯ ಲಿಂಗಿಗಳು ಜಮಾವಣೆಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.