ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಐಶ್ವರ್ಯಾ 17ಕ್ಕೆ ಕಾಲಿಲ್ಲಿದ್ದೂ, ಈಕೆಯ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.
ಹೊಸ ಸಿನಿಮಾದ ಪ್ರಚಾರ ಕಾರ್ಯಕ್ಕೆ ಬ್ರೇಕ್ ಕೊಟ್ಟು ಮಗಳ ಬರ್ತ್‌ಡೇಯನ್ನು ಉಪೇಂದ್ರ ಆಚರಿಸಿದ್ದಾರೆ. ಮಗಳಿಗೆ ಕೇಕ್ ತಿನ್ನಿಸಿ ಸಿಹಿ ಮುತ್ತು ಕೊಟ್ಟು ಮುದ್ದು ಮಾಡಿದ್ದಾರೆ ಉಪೇಂದ್ರ ದಂಪತಿ.
ಹುಟ್ಟುಹಬ್ಬದ ಸುಂದರ ಫೋಟೋಗಳನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹ್ಯಾಪಿ ಬರ್ತ್‌ಡೇ ಬೇಬಿ. ಎಂದಿಗೂ ಚೆನ್ನಾಗಿರು, ನಿನ್ನನ್ನು ನೀನು ನಂಬು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಪ್ರಿಯಾಂಕಾ ಉಪೇಂದ್ರ ಮಗಳಿಗೆ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿಶ್ ಮಾಡಿದ್ದಾರೆ.
ಬರ್ತ್‌ಡೇಯಂದು ಐಶ್ವರ್ಯಾ ಆಕಾಶ ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಶಾರ್ಟ್ ಆಗಿ ಹೇರ್ ಕಟ್ ಮಾಡಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟನ ಪುತ್ರಿಯ ಜನ್ಮದಿನಕ್ಕೆ ನಟಿ ಮಾನ್ಯಾ ನಾಯ್ಡು, ಹರ್ಷಿಕಾ ಪೂಣಚ್ಚ, ಕೀರ್ತಿ ವಿಷ್ಣುವರ್ಧನ್ ಸೇರಿದಂತೆ ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.
ಐಶ್ವರ್ಯಾ ಅವರು ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟಾಗಿ ಅವರು ಆ್ಯಕ್ಟೀವ್ ಆಗಿಲ್ಲ. ಆದರೆ ನಟನ ಪುತ್ರ ಆಯುಷ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡಿ ಗುರುತಿಸಿಕೊಳ್ಳುವ ಮಹದಾಸೆ ಅವರಿಗಿದೆ. ಉಪೇಂದ್ರ ಅವರು ಅರ್ಜುನ್ ಜನ್ಯ ನಿರ್ದೇಶನದ ʻ45’ ಸಿನಿಮಾ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪಿ ಪತ್ನಿ ಪ್ರಿಯಾಂಕಾ ಕೂಡಾ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
ಉಪ್ಪಿ ಪತ್ನಿ ಪ್ರಿಯಾಂಕಾ ಕೂಡಾ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.