ಬೆಳ್ತಂಗಡಿ: ಇಲ್ಲಿನ ಕೊಲ್ಪೆದಬೈಲು, ಮಾಲಾಡಿ ಗ್ರಾಮದ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕದ್ದ ಕೃತ್ಯ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ 58ರ ಹರೆಯದ ವಸಂತಿ ಹೆಗ್ಡೆ ಅವರು ನಿನ್ನೆ ತನ್ನ ಮಗ ಹಾಗೂ ಸೊಸೆ ಜೊತೆ ಬೆಳ್ತಂಗಡಿಗೆ ಹೋಗಿದ್ದರು. ಮಧ್ಯಾಹ್ನ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಬೀಗು ಮುರಿದು ಕಳ್ಳರು ಒಳನುಗ್ಗಿದ್ದು, ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ 30,000 ಹಣವನ್ನು ಎಗರಿಸಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ತೂಕ 160.5 ಗ್ರಾಂ ಆಗಿದ್ದು ಇದರ ಮೌಲ್ಯ ರೂಪಾಯಿ 13,72,000/- ಆಗಿರುತ್ತದೆ. ನಗದು ಸೇರಿ ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂಪಾಯಿ 14,02,000 ಆಗಿದೆ ಎಂದು ವಸಂತಿ ಶೆಟ್ಟಿ ನೀಡಿದ ದೂರಿನಂತೆ, ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.