ಜೈಲಿನಿಂದ ಬಿಡುಗಡೆಯಾಗಿ ಮೂರೇ ತಿಂಗಳಲ್ಲಿ ಬಾಲಕನನ್ನು ಎತ್ತಿಬಿಟ್ಟಳು ಲೇಡಿ ಡಾನ್‌ ಜಿಕ್ರಾ?

ನವದೆಹಲಿ: ಜೈಲಿನಿಂದ ಬಿಡುಗಡೆಯಾಗಿ ಬರೇ ಮೂರು ತಿಂಗಳಲ್ಲಿ 17ರ ಬಾಲಕನನ್ನು ಲೇಡಿ ಡಾನ್‌ ಜಿಕ್ರಾ ಹತ್ಯೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೆಹಲಿಯ ಸೀಲಾಂಪುರ್‌ನಲ್ಲಿ ಗುರುವಾರ ಸಂಜೆ ನಡೆದ 17 ವರ್ಷದ ಬಾಲಕ ಕುನಾಲ್ ಕುಮಾರ್‌ನ ಕೊಲೆಯಯಾಗಿತ್ತು. ಈ ಹತ್ಯೆಯ ಹಿಂದೆ ಲೇಡಿ ಡಾನ್ ಗ್ಯಾಂಗ್‌ಸ್ಟರ್‌ ಜಿಕ್ರಾಳ ಪಾತ್ರವಿದೆ ಎಂಬ ಗಂಭೀರ ಆರೋಪವನ್ನು ಬಾಲಕನ ಮನೆಮಂದಿ ಮಾಡಿದ್ದಾರೆ.

Who is Ziqra? Social media 'lady don' linked to murder

ಗುರುವಾರ ಸಂಜೆ 7:30 ವೇಳೆಗೆ ತನ್ನ ಮನೆಯ ಸಮೀಪದ ಅಂಗಡಿಯಿಂದ ಹಾಲು ಖರೀದಿಸಲು ಹೋಗಿದ್ದ ಕುನಾಲ್ ಕುಮಾರ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಚಾಕುಗಳನ್ನು ಹಿಡಿದಿದ್ದ ಐವರು ಸೀಲಾಂಪುರ್‌ನ ಜೆ ಬ್ಲಾಕ್‌ನ ಕಿರಿದಾದ ಓಣಿಗಳಲ್ಲಿ ಪರಾರಿಯಾಗುವ ಮೊದಲು ಕುನಾಲ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

 

ಕುಮಾರ್ ಕುಟುಂಬ ಮತ್ತು ಸ್ಥಳೀಯರು ಈ ಹತ್ಯೆಯನ್ನು ಜಿಕ್ರಾ ಮತ್ತು ಆಕೆಯ ಸಹೋದರ ಸಾಹಿಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಕೇಳಿ ಬರುತ್ತಿದ್ದಂತೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನನ್ನ ತಮ್ಮ ಹಾಲು ತರಲು ಹೊರಗೆ ಹೋಗಿದ್ದ. ಯಾರೋ ಅವನನ್ನು ಹೊರಗೆ ಕರೆದರು. ಕೇವಲ ಮೂರು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ಜಿಕ್ರಾ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂದು ಕುನಾಲ್‌ ಸಹೋದರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾಳೆ. ಕುನಾಲ್‌ ತಂದೆ ಪ್ರತಿಕ್ರಿಯಿಸಿ, ಜಿಕ್ರಾ ಹಲವು ಬಾರಿ ನನ್ನ ಪುತ್ರನಿಗೆ ಬೆದರಿಕೆ ಹಾಕಿದ್ದಳು. ಅವಕಾಶ ಸಿಕ್ಕರೆ ನನ್ನ ಮಗನನ್ನು ಕೊಲ್ಲುವುದಾಗಿ ಹೇಳಿದ್ದಳು ಎಂದು ತಿಳಿಸಿದರು.

"Lady Don" Link Emerges In Delhi Teen's Murder Amid Protests, AAP vs BJP

ಯಾರು ಈ ಲೇಡಿ ಡಾನ್‌?

ಇನ್‌ಸ್ಟಾಗ್ರಾಮ್‌ನಲ್ಲಿ ʻಲೇಡಿ ಡಾನ್ʼ ಎಂದು ಕರೆದುಕೊಳ್ಳುವ ಜಿಕ್ರಾ ಗ್ಯಾಂಗ್‌ಸ್ಟಾರ್, ಕುಖ್ಯಾತ ದರೋಡೆಕೋರ ಹಾಶಿಮ್ ಬಾಬಾನ ಪತ್ನಿ. ಕಳೆದ ವರ್ಷ ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಜಿಮ್ ಮಾಲೀಕ ನಾದಿರ್ ಶಾ ಕೊಲೆ ಸೇರಿದಂತೆ ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಹಶಿಮ್‌ ಬಾಬಾನ ಪಾತ್ರವಿದ್ದು ಸದ್ಯ ಜೈಲಿನಲ್ಲಿದ್ದಾನೆ.

लेडी डॉन जिकरा; 15 दिन पहले जेल से छूटी, अब कुणाल हत्याकांड में आया नाम,  डॉन हाशिम बाबा से रहा कनेक्शन | Lady Don zikra in Seelampur Kunal murder  case Delhi Connection
ಜಿಕ್ರಾ ಸುಮಾರು 10 ರಿಂದ 15 ಯುವಕರ ಗುಂಪನ್ನು ಕಟ್ಟಿಕೊಂಡು ಸುತ್ತಾಡುತ್ತಿರುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಆಯುಧಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಅಪ್ಲೋಡ್‌ ಮಾಡುತ್ತಿರುತ್ತಾಳೆ. ಕಳೆದ ತಿಂಗಳು ಜಿಕ್ರಾ ದೇಶೀಯ ಪಿಸ್ತೂಲ್ ಅನ್ನು ಪ್ರದರ್ಶಿಸುವ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಳು. ಶಸ್ತಾಸ್ತ್ರ ಕಾಯ್ದೆಯಡಿಯಲ್ಲಿ ಆಕೆಯನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು ಮತ್ತು ವಿಡಿಯೋವನ್ನು ತೆಗೆಯಲಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಪ್ಯಾಲೆಸ್ತೀನ್‌ ಧ್ವಜವನ್ನು ಹಾಕಿರುವ ಈಕೆಯ sher_di_sherni_00 ಖಾತೆಯನ್ನು 15 ಸಾವಿರಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಜಿಕ್ರಾ ಆಗಾಗ ಪಿಸ್ತೂಲ್ ತೋರಿಸುತ್ತಾ ಸುತ್ತಾಡುತ್ತಾಳೆ ಎಂದು ಸ್ಥಳೀಯರು ಹೇಳಿದ್ದಾರೆ

error: Content is protected !!