ಮೂಲ್ಕಿ : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ಸಂದರ್ಭ ಬ್ರಹ್ಮರಥ ಕುಸಿದ ಬೆನ್ನಲ್ಲೇ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಇವರು ಪ್ರತೀ ವರ್ಷ ಜಾತ್ರಾ ಸಂದರ್ಭ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಅಂತೆಯೇ ಈ ಬಾರಿ ಕೂಡ ನಟ ಸುನಿಲ್ ಶೆಟ್ಟಿ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಅನತಿ ದೂರದಲ್ಲಿ ಸುನಿಲ್ ಶೆಟ್ಟಿಯವರ ಮನೆ ಇದ್ದು, ದೇವರು ಜಳಕ ಮುಗಿಸಿ ಬರುವಾಗ ಇವರ ಮನೆಯ ಮುಂಭಾಗದ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯುತ್ತದೆ. ಈ ಸಂದರ್ಭ ಸುನೀಲ್ ಶೆಟ್ಟಿ ಉಪಸ್ಥಿತರಿದ್ದರು. ಪ್ರತೀ ವರ್ಷ ತಪ್ಪದೆ ಸುನಿಲ್ ಶೆಟ್ಟಿ ಇಲ್ಲಿಗೆ ಆಗಮಿಸುತ್ತಾರೆ.
ಸದ್ಯ ಸುನಿಲ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ನಟಿಸಿದ್ದು ಅದಿನ್ನೂ ಬಿಡುಗಡೆಗೆ ಬಾಕಿ ಇದೆ. ಸಿ ವಿಶೇಷವೆಂದರೆ ಅವರು ಇದೇ ಮೊದಲ ಬಾರಿಗೆ ʻಜೈʼ ಎಂಬಬ ತುಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿದ್ದಾರೆ.