
ಮಂಗಳೂರು: ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಬರುವ ರೀತಿ ಅಸಭ್ಯವಾಗಿ ವರ್ತಿಸಿ ಆಝಾನ್ ಕೂಗುವ ದೃಶ್ಯವನ್ನು ಯುವಕರ ತಂಡ ಚಿತ್ರಿಸಿರುವ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಮುದಾಯದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.
ವೇಣೂರು ಸಮೀಪ ಪೆರಾಡಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ತಂಡವೊಂದು ಮುಸ್ಲಿಮರ ಸಾಂಪ್ರದಾಯಿಕ ಉಡುಪು ಧರಿಸಿ ಆಝಾನ್ ಕೂಗಿ ಅಶ್ಲೀಲವಾಗಿ ಕುಣಿಯುತ್ತಿರುವುದು ವೀಡಿಯೋದಲ್ಲಿದೆ. ಈ ಬಗ್ಗೆ ಎಸ್ ಡಿಪಿಐ ಪೊಲೀಸರಿಗೆ ದೂರು ನೀಡಿದ್ದು ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.