ದಯವಿಟ್ಟು ಕ್ಷಮಿಸಿ ತಪ್ಪಾಯ್ತು: ರೀಲ್ಸ್‌ ಸ್ಟಾರ್‌ ಸೋನು ಗೌಡ ಕ್ಷಮೆ ಯಾಚಿಸಿದ್ದು ಯಾಕೆ?

ಬೆಂಗಳೂರು: ಮಾನ್ಯತೆ ಪಡೆಯದ ಬೆಟ್ಟಿಂಗ್ ಆಪ್ ಬಗ್ಗೆ ಪ್ರಮೋಷನ್‌ ಮಾಡಿದ ಆರೋಪದ ಮೇಲೆ ವಿಚಾರಣೆ ಎದುರಿಸಿದ್ದ ರೀಲ್ಸ್‌ ಸ್ಟಾರ್‌ ಸೋನು ಶ್ರೀನಿವಾಸ್‌ ಗೌಡ ಸೇರಿದಂತೆ ಹಲವರು ಈಗ ಕ್ಷಮೆ ಕೋರಿದ್ದಾರೆ.

Sonu Srinivas Gowda: ಸೋನು ಶ್ರೀನಿವಾಸ್ ಗೌಡ ಅರೆಸ್ಟ್: ಎಫ್​ಐಆರ್​ನಲ್ಲಿ​ ಉಲ್ಲೇಖವಾದ ವಿಚಾರಗಳೇನು?

 

ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ ನಮ್ಮ ರೀಲ್ಸ್ ಸ್ಟಾರ್‌ಗಳಿಗೆ ಬಿಸಿಮುಟ್ಟುತ್ತಿದ್ದಂತೆ ಜ್ಞಾನೋದಯವಾಗಿದೆ. ತಾವು ಮಾಡಿದ ತಪ್ಪಿನ ಬಗ್ಗೆ ಅರಿವಾಗಿ ಯಾವ ಯಾವ ಅಕೌಂಟ್‌ಗಳಲ್ಲಿ ಬೆಟ್ಟಿಂಗ್ ಬಗ್ಗೆ ಪುಂಖಾನು ಪುಂಖವಾಗಿ ಪುಂಗಿ ಊದುತ್ತಾ ಜನರನ್ನ ದಾರಿ ತಪ್ಪಿಸುವ ಪ್ರಯತ್ನ ಪಟ್ಟಿದ್ರೋ ಅದೇ ಅಕೌಂಟ್‌ಗಳಲ್ಲಿ ಇನ್ಮುಂದೆ ನಾನು ಯಾವುದೇ ಕಾರಣಕ್ಕೂ ಬೆಟ್ಟಿಂಗ್ ಪ್ರಮೋಷನ್ ಮಾಡಲ್ಲ.

ನಾವು ಬೆಟ್ಟಿಂಗ್ ಪ್ರಮೋಷನ್ ಮಾಡುವುದರಿಂದ ಜನರ ಲಕ್ಷಾಂತರ ರೂಪಾಯಿ ಹಾಕಿ ಬೀದಿಗೆ ಬರ್ತಾರೆ. ಹಾಗಾಗಿ ಐಪಿಎಲ್ ಬೆಟ್ಟಿಂಗ್ ಬಗ್ಗೆ ಯಾರೇಲ್ಲ ಪ್ರಮೋಷನ್ ಮಾಡ್ತಾ ಇದ್ದಿರಾ ಅವರೇಲ್ಲರು ಕೂಡ ದಯವಿಟ್ಟು ಸ್ಟಾಪ್ ಮಾಡಿ ಅಂತಲೂ ಮನವಿ ಮಾಡಿಕೊಂಡಿದ್ದಾರೆ.

 

ಇತ್ತೀಚೆಗಷ್ಟೇ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳು ಬೆಂಗಳೂರು ಸೈಬರ್ ಕ್ರೈಂ ಪೊಲೀಸರ ತನಿಖೆ ಎದುರಿಸಿದ್ದರು. ಐಪಿಎಲ್ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಷನ್ ಮಾಡಿದ್ದ ಕಾರಣ ಸುಮಾರು 50ಕ್ಕೂ ಹೆಚ್ಚು ಸ್ಟಾರ್‌ಗಳಿಗೆ ಸೈಬರ್ ಕ್ರೈಂ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಎದುರಿಸಿದ್ದರು.

ದುಡ್ಡಿನ ಆಸೆಗೆ ಬಿದ್ದು ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಟ್ ಮಾಡಿದರೆ ಕೇಸ್ ಹಾಕಿ ಜೈಲಿಗೆ ಕಳಿಸುವ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದರು.

ಹಾಗಾಗಿ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಟ್ ಮಾಡಿದ್ದ ವಿಡಿಯೋಗಳನ್ನ ಡಿಲೀಟ್ ಮಾಡಿ ಅವರದ್ದೇ ಅಕೌಂಟ್‌ಗಳಲ್ಲಿ ಅಪಾಲಜಿ ಮಾಡಿಕೊಂಡಿದ್ದಾರೆ.

error: Content is protected !!