ಸುರತ್ಕಲ್: ಇಲ್ಲಿನ ಎನ್ ಐಟಿಕೆ ಬೀಚ್ ನಲ್ಲಿ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಇಂದು ಸಂಜೆ ನಡೆದಿದೆ.
ಒಬ್ಬನ ಮೃತದೇಹ ಪತ್ತೆಯಾಗಿದ್ದು ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಸೂರಿಂಜೆಯ ಕುಟುಂಬವೊಂದರ ಯುವತಿಯ ಮದುವೆ ನಾಳೆ ನಡೆಯಲಿದ್ದು ಮನೆಗೆ ಮುಂಬೈ ಯಿಂದ ನೆಂಟರು ಬಂದಿದ್ದರು. ಅವರ ಜೊತೆ ಮದುಮಗಳ ತಮ್ಮ ಸಹಿತ ಬಾಲಕರು ಬೀಚ್ ಗೆ ಬಂದಿದ್ದು ನೀರು ಪಾಲಾಗಿದ್ದಾರೆ. ಘಟನೆಯಿಂದ ಮನೆಯಲ್ಲಿ ಶೋಕ ಮನೆಮಾಡಿದೆ.