ಮಂಗಳೂರು: ಪುಟ್ಟಗೌರಿ ಮದುವೆಯಲ್ಲಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಮನೆಮಗಳಾಗಿದ್ದ ಪುಟ್ಟಗೌರಿ ನಟಿ ಸಾನ್ಯಾ ಅಯ್ಯರ್, ಬಿಗ್ ಬಾಸ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಬಿಗ್ ಬಾಸ್‌ನಲ್ಲಿ ತುಳು ಚಿತ್ರ ನಟ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಬಾಂಡಿಂಗ್ ಬಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಇವರಿಬ್ಬರು ಪ್ರೀತಿಸುತ್ತಿದ್ದು, ಸದ್ಯದಲ್ಲಿಯೇ ಹಸಮನೆ ಏರಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಶೇರ್ ಮಾಡಿರುವ ನಟಿ ಸಾನ್ಯಾ ಅಯ್ಯರ್ ಲವ್ ಬ್ರೇಕ್ ಅಪ್ ಬಗ್ಗೆಯೂ ಮಾತನಾಡಿದ್ದಾರೆ.
ನಾನು ಚಿಕ್ಕಂದಿನಿಂದಲೂ ಫೇಲ್ ಆಗಿರುವ ಲವ್ ಸ್ಟೋರಿಗಳನ್ನು ನೋಡಿದ್ದೇನೆ. ನಮ್ಮ ಮನೆಯಲ್ಲಿಯೂ ನನ್ನ ತಂದೆ ತಾಯಿಯ ದಾಂಪತ್ಯ ಜೀವನ ಅಷ್ಟು ಚೆನ್ನಾಗಿ ಇಲ್ಲದಿದ್ದ ಕಾರಣ ನನಗೆ ಪ್ರೀತಿ ಎಂದರೇನು ಎಂಬುದೇ ಅರ್ಥವಾಗಿರಲಿಲ್ಲ.
ಟೀನೇಜ್ ನಲ್ಲಿ ಇದ್ದ ಲವ್ ಸ್ಟೋರಿ ನನಗೆ ಬಹಳ ಟಾಕ್ಸಿಕ್ ರಿಲೇಷನ್ ಶಿಪ್ ಆಗಿತ್ತು. ಒಂದು ರಿಲೇಷನ್ ಶಿಪ್ ನಲ್ಲಿ ನಾವು ಏನನ್ನು ಬಯಸಬೇಕು ಎಂಬುದೇ ನನಗೆ ಸರಿಯಾಗಿ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದರ ಜೊತೆಗೆ ಪ್ರೀತಿ ಸಿಗದೇ ಇದ್ದರೂ ಸಿಕ್ಕಿರುವುದನ್ನೇ ಪ್ರೀತಿ ಎಂದು ನಂಬಿ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕು ಅನ್ನುವುದೇ ನನ್ನ ಮನಸ್ಥಿತಿಯಾಗಿತ್ತು. ಈ ಕಾರಣದಿಂದಲೇ ಹಲವು ಬ್ರೇಕ್ ಅಪ್ ಗಳು ಅದವು. ಈಗ ನನಗೆ ಇವೆಲ್ಲವುದರ ಅರಿವಿದೆ. ನನ್ನ ಕೆಲವು ಮಾನಸಿಕ ಗೊಂದಲಗಳನ್ನು ರೇಖೆ ಚಿಕಿತ್ಸೆ ಪರಿಹಾರ ಮಾಡಿದೆ ಎಂದರು.
ಈಗ ನಾನು ಒಂದು ಆರೋಗ್ಯವಂತ ರಿಲೇಷನ್ ಶಿಪ್ ಅಂದರೇನು ಎಂಬುದನ್ನು ತಿಳಿದುಕೊಂಡಿದ್ದೇನೆ. ನನಗೆ ಒಂದು ಸಂತೋಷದಾಯಕ ಪ್ರಾಮಾಣಿಕ ರಿಲೇಶನ್ಶಿಪ್ ಬೇಕು ಯಾವುದೇ ರೀತಿಯ ಟಾಕ್ಸಿಕ್ ರಿಲೇಷನ್ ಶಿಪ್ ನಲ್ಲಿರಲು ನಾನು ಇಷ್ಟಪಡುವುದಿಲ್ಲ ಎಂದಿದ್ದಾರೆ ನಟಿ ಸಾನ್ಯಾ ಅಯ್ಯರ್.