ಸಿನಿಮಾ ಹಾಲ್‌ಗಳಲ್ಲಿಯೂ ಮದ್ಯ ಸೇವನೆಗೆ ಅವಕಾಶ!?

ಬೆಂಗಳೂರು: ಸಿನಿಮಾ ಹಾಲ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು ಹಾಗೂ ನಗರದ ಹೊರವಲಯದಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಹಾಲ್‌ಗಳಲ್ಲಿ ರಾಜಾರೋಷವಾಗಿ ಮದ್ಯ ಕುಡಿಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಬಾರ್ ಹಾಗೂ ರೆಸ್ಟೋರೆಂಟ್‌ಗಳಂತೆ ಮುಂದೆ ಸಿನಿಮಾ ಹಾಲ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಚಿತ್ರಮಂದಿಗಳ ಪ್ರೇಕ್ಷಕರ ಬರ ಎದುರಿಸುತ್ತಿವೆ. ಮೊಬೈಲ್, ಓಟಿಟಿ ಹೆಚ್ಚಾಗಿ ಜನ ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ಸಿನಿಮಾಗಳನ್ನು ಮಾತ್ರ ನೋಡಲು ಮನಸ್ಸು ಮಾಡುತ್ತಾರೆ. ಇನ್ನುಳಿದಂತೆ ಸಾಕಷ್ಟು ಸಮಯದಲ್ಲಿ ಚಿತ್ರಮಂದಿರಗಳು ಖಾಲಿ ಹೊಡೆಯುತ್ತವೆ. ಚಿತ್ರಮಂದಿರಗಳನ್ನೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವು ಚಿತ್ರಮಂದಿರಗಳನ್ನು ನೆಲಸಮ ಮಾಡಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಲಾಗಿದೆ.

ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸಂಸ್ಕೃತಿ ಕಮ್ಮಿ ಆಗುತ್ತಿದೆ. ಪಿವಿಆರ್‌ ಹಾಗೂ ಐನಾಕ್ಸ್ ಚೈನ್‌ ದೇಶಾದ್ಯಂತ ಸಿನಿಮಾ ಪ್ರದರ್ಶನದಲ್ಲಿ ಮುಂದಿದೆ. ಆದರೆ ಅಲ್ಲಿ ಟಿಕೆಟ್ ದರ, ಸ್ನ್ಯಾಕ್ಸ್, ಪಾರ್ಕಿಂಗ್ ದರ ಎಲ್ಲವೂ ಪ್ರೇಕ್ಷಕರು ಹೆದರುವಂತಾಗಿದೆ. ಈಗ ಒಂದು ಕುಟುಂಬ ಸಿನಿಮಾ ನೋಡಿ ಬರಲು ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಲು ಪಿವಿಆರ್ ಹಾಗೂ ಐನಾಕ್ಸ್‌ ನಾನಾ ಕರಸತ್ತು ಮಾಡುತ್ತಿದೆ. ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ನೀಡಿ ಪ್ರೇಕ್ಷಕರನ್ನು ಸೆಳೆಯುವ ತಂತ್ರವೂ ಮಾಡಲಾಯಿತು. ಆದರೆ ಅದು ದೊಡ್ಡದಾಗಿ ಯಶಸ್ವಿ ಆಗಲಿಲ್ಲ. ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಮದ್ಯ ಮಾರಾಟ ಮಾಡುವ ಪ್ರಯತ್ನಕ್ಕೆ ಕೈ ಹಾಕಲಾಗುತ್ತಿದೆ. ಆದರೆ ಬಾರ್‌ನಂತೆ ಕುಡಿಯಲು ಅವಕಾಶವಿಲ್ಲದಿದ್ದರೂ ಸಿನಿಮಾ ನೋಡುತ್ತಾ ಮದ್ಯ ಸೇವಿಸಿ ಎಂಜಾಯ್‌ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಷರತ್ತುಗಳು ಅನ್ವಯವಾಗಲಿದೆ.

ಎಚ್ಚರಿಕೆ: ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ

error: Content is protected !!