ಬೆಂಗಳೂರು: ಪತಿಗೆ ಅಕ್ರಮ ಸಂಬಂಧದ ಇದೆ ಎಂದು ಆರೋಪಿಸುತ್ತಿದ್ದ ಪತ್ನಿ ಬಾಹರ್ ಅಸ್ಮಾ(29) ಎಂಬಾಕೆ ನೇಣು ಬಿಗಿದು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಲದೇ ಮೃತ ಮಹಿಳೆಯ ಪತಿ ಬಶೀರ್ ಉಲ್ಲಾನನ್ನ ಹೆಬ್ಬಾಳ ನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಉಳಿದ ಜಬೀನ್ ತಾಜ್, ಹರ್ಷದ್ ಉಲ್ಲಾ, ಮಜರ್ ಖಾನ್, ತರ್ಬೇಜ್ ಖಾನ್, ಹರ್ಷಿಯಾ, ನೌಶದ್ ಎಂಬುವವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಬಾಹರ್ ಅಸ್ಮಾ ಕಳೆದ 2 ವರ್ಷಗಳ ಹಿಂದೆ ಬಶೀರ್‌ನನ್ನ ಮದುವೆಯಾಗಿದ್ದರು. ಆದರೆ ಬಶೀರ್ ಉಲ್ಲಾಗೆ ಬೇರೆ ಯುವತಿ ಜೊತೆಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸುತ್ತಿದ್ದಳು. ಅಲ್ಲದೆ ಈಕೆಯ ಶವ ಮನೆಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಸ್ಮಾಳ ಶವ ಪತ್ತೆಯಾಗಿತ್ತು.
ಈ ಸಂಬಂಧ ಅಸ್ಮಾ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಪತಿ ಬಶೀರ್‌ನನ್ನ ಬಂಧಿಸಿದ್ದಾರೆ. ಬಶೀರ್ ವಿಚಾರಣೆ ನಡೆಸಿದಾಗ ಈತನ ಕಿರುಕುಳಕ್ಕೆ ಅಸ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಿಚಾರಣೆ ಬಳಿಕ ಬಶೀರ್ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.