ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ತಯಾರಾದ “90 ಎಮ್ ಎಲ್” ತುಳು ಚಲನ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಸಿನಿಮಾವು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ.
ವಿನೀತ್ ಕುಮಾರ್ ಅಭಿನಯದ 90 ಎಮ್ ಎಲ್ ಸಿನಿಮಾದಲ್ಲಿ ರುಹಾನಿ ಶೆಟ್ಟಿ , ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು, ನಮಿತ , ಶೈಲಾಶ್ರೀ, ಧೃತಿ ನಟಿಸಿದ್ದಾರೆ.
ರಂಜಿತ್ ಸಿ ಬಜಾಲ್ ಕಥೆ. ಚಿತ್ರಕಥೆ, ನಿರ್ದೇಶನ ಮಾಡಿದ್ದು, ಸಂಭಾಷಣೆ ತುಳಸಿದಾಸ್ ಮಂಜೇಶ್ವರ್, ಛಾಯಾಗ್ರಾಹಣ ಅರ್ಜುನ್ ಎಂವಿ, ಸಂಗೀತ ಸೃಜನ್ ಕುಮಾರ್ ತೋನ್ಸೆ, ಸಂಕಲನ ಸಚಿನ್ ರಾಮ್, ಪಿ ಆರ್ ಒ ಬಾಳ ಜಗನ್ನಾಥ ಶೆಟ್ಟಿ, ಡಿಸೈನ್ ಆಚಾರ್ಯ ಗುರು.
90 ಎಮ್ ಎಲ್ ತುಳು ಸಿನಿಮಾ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ, ಹಾಸ್ಯ ಮನರಂಜನೆಯೊಂದಿಗೆ ಉತ್ತಮ ಕತೆಯನ್ನು ಒಳಗೊಂಡಿದೆ. ಖ್ಯಾತ ಕಲಾವಿದರು ಅಭಿನಯಿಸಿರುವ 90 ಎಮ್ ಎಲ್ ಸಿನಿಮಾ 2025 ರ ಒಳಗಡೆ ತೆರೆಕಾಣಲಿದೆ.