ಪ್ರಯಾಗ್‌ ರಾಜ್‌ ನಲ್ಲಿ ಮಸೀದಿ ಕಟ್ಟಡ ಏರಿ ಕೇಸರಿ ಧ್ವಜ ಹಾರಾಟ!

ಪ್ರಯಾಗ್‍ ರಾಜ್: ರಾಮನವಮಿಯ ದಿನವಾದ ರವಿವಾರ ಜಿಲ್ಲೆಯ ಮಸೀದಿಯೊಂದರ ತುದಿಗೆ ಏರಿದ ಸಂಘ ಪರಿವಾರದ ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಬೀಸಿರುವ ಘಟನೆ ನಡೆದಿದೆ. ಸೈಯ್ಯದ್ ಸಲಾರ್ ಗಾಝಿ ದರ್ಗಾದ ತುದಿಗೆ ಏರಿದ ಸಂಘ ಪರಿವಾರದ ಕಾರ್ಯಕರ್ತರು ಅಲ್ಲಿಂದ ಕೇಸರಿ ಧ್ವಜಗಳನ್ನು ಬೀಸಿ, ದೊಡ್ಡ ದನಿಯಲ್ಲಿ ಜೈಶ್ರೀರಾಂ ಘೋಷಣೆ ಕೂಗುತ್ತಿರುವ ದೃಶ್ಯಾವಳಿಗಳು ಜಾಲತಾಣ ತುಣುಕಿನಲ್ಲಿ ಹರಿದಾಡುತ್ತಿದೆ.

ಘಟನೆ ಬೆನ್ನಲ್ಲೇ ಪೊಲೀಸರು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ. ಆದರೆ ಇದುವರೆಗೆ ಘಟನೆಯ ಸಂಬಂಧ ಯಾವುದೇ ವ್ಯಕ್ತಿಗಳನ್ನು ಬಂಧಿಸಿಲ್ಲ ಎಂದು ಹೇಳಲಾಗುತ್ತಿದೆ.
error: Content is protected !!