ಹುಬ್ಬಳ್ಳಿ: ʻಶ್ರೀರಾಮ ಯಾವುದೇ ಜಾತಿಗೆ ಮೀಸಲಿಲ್ಲ. ದಲಿತರು, ಹಿಂದುಳಿದವರು, ಮೇಲ್ವರ್ಗದವರೆಲ್ಲರ ಮನೆಯಲ್ಲಿ ರಾಮ ಇದ್ದಾನೆ. ಜಗತ್ತಿನಲ್ಲಿ ಮೊದಲು ಹುಟ್ಟಿದ್ದು ಸನಾತನ ಧರ್ಮ. ವಕ್ಫ್‌ಗೆ ಹಿಂದೂಗಳು ವಿರೋಧ ಮಾಡುತ್ತಿದ್ದಾರೆ. ದೇಶ ಸುರಕ್ಷಿತವಾಗಿರಬೇಕಾದರೆ ನರೇಂದ್ರ ಮೋದಿ ಕಾರಣ. ನನ್ನ ಹೃದಯದಲ್ಲಿ ಬಿಜೆಪಿ ಇದೆ. ನಾನು ಇಲ್ಲದೆ ಯಾರೂ ಅಧಿಕಾರಕ್ಕೆ ಬರಲ್ಲʼ ಎಂದು ಬಿಜೆಪಿಯಿಂದ ಉಚ್ಛಾಟಿತ ಯತ್ನಾಳ್ ಹೇಳಿದ್ದಾರೆ.
ಹಿಂದೂಪರ ಕರ್ನಾಟಕದಲ್ಲಿ ಯಾರು ಮಾತನಾಡುತ್ತಾರೆ ಅವರೇ ಮುಂದಿನ ಮುಖ್ಯಮಂತ್ರಿ. 2028ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ. ನಾನು ಗೃಹ ಮಂತ್ರಿ ಆಗಿದ್ದರೆ, ಹಳೇ ಹುಬ್ಬಳ್ಳಿ ಠಾಣೆ ಹೊಕ್ಕಿದ್ದವರನ್ನು ಜನ್ನತ್ ಗೆ ಕಳುಹಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಹೊಸ ಪಕ್ಷ ಪ್ರಾರಂಭವಾಗುವುದು ಖಚಿತ ಎನ್ನುವ ಸುಳಿವನ್ನು ಅವರು ಕೊಟ್ಟಿದ್ದಾರೆ. ಶ್ರೀರಾಮ ಜಯಂತಿ, ಗಣೇಶೋತ್ಸವಕ್ಕೆ ಮೆರವಣಿಗೆ ನಡೆಸಿದ ಹಿಂದುಗಳ ಮೇಲೆ ಕಲ್ಲು ಹೊಡೆದರೆ ಅವರೆಲ್ಲರೂ ಜನ್ನತ್ ಗೆ ಸಿದ್ಧರಾಗಿರಿ. ಗಣಪತಿಯನ್ನೂ ಜೈಲಿಗೆ ಹಾಕುವಂತಹ ಕೆಟ್ಟ ಸರ್ಕಾರ ಬಂದಿದೆ ಎಂದು ಕಿಡಿಕಾರಿದರು.