ಮಂಗಳೂರು : ಮಂಗಳೂರು ಬಸ್ ನಿಲ್ದಾಣದಲ್ಲಿ ಗುರುವಾರ(ಮಾ.05) ನೂತನ ಮಂಗಳೂರು-ಮೂಡುಜೆಪ್ಪು ಸರಕಾರಿ ನಗರ ಸಾರಿಗೆ ಬಸ್ಸಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ರವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಸುರೇಂದ್ರ ಕಂಬಳಿ, ಗ್ಯಾರೆಂಟಿ ಸಮಿತಿಯ ಸದಸ್ಯರು, ಕೆಎಸ್‌ಆರ್‌ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಡಿಟಿಓ – ಕಮಲ್‌ಕುಮಾರ್, ಡಿಎಂಇ-ವಿನಯ್ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು. ಸದರಿ ಬಸ್ಸು ಮಂಗಳೂರು ಬಸ್ಸು ನಿಲ್ದಾಣದಿಂದ 07.05, 09.00, 11.15, 13.30, 15.10, 17.00 ಗಂಟೆಗೆ ಮಲ್ಲಿಕಟ್ಟೆ, ನಂತೂರು, ಕುಡುಪು, ವಾಮಂಜೂರು,ಉಳಾಯಿಬೆಟ್ಟು ಮಾರ್ಗವಾಗಿ ಮೂಡುಜೆಪ್ಪುವಿಗೆ ಹಾಗೂ ಮರು ಪ್ರಯಾಣದಲ್ಲಿ ಮೂಡುಜೆಪ್ಪುವಿನಿಂದ ಮಂಗಳೂರಿಗೆ 08.00, 10.00, 12.15, 14.20, 16.00, 18.00 ಗಂಟೆಗೆ ಕಾರ್ಯಾಚರಣೆಯಾಗಲಿದೆ.


ಈ ಸಂದರ್ಭದಲ್ಲಿ ಮಾನ್ಯ ಶಾಸಕರು, ಜನತೆಯ ಬಹು ಬೇಡಿಕೆಯ ಸುರತ್ಕಲ್ – ಪರಂಗಿಪೇಟೆ ಮತ್ತು ಆಕಾಶಭವನ – ಪಡೀಲ್ ನೂತನ ಬಸ್ ಸಂಚಾರವನ್ನು ಕೂಡಲೇ ಆರಂಭಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.