ರಶ್ಮಿಕಾ ಹುಟ್ಟುಹಬ್ಬ, ದೇವರಕೊಂಡ ಜೊತೆ ಒಮನ್‌ ಹಾರಿದ ನ್ಯಾಶನಲ್‌ ಕ್ರಶ್!?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ನಟಿ ರಶ್ಮಿಕಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತೀ ಬಾರಿ ಒಂದೊಂದು ದೇಶದಲ್ಲಿ ಜನ್ಮ ದಿನವನ್ನು ಆಚರಿಸಿಕೊಳ್ಳುವ ರಶ್ಮಿಕಾ ಈ ಬಾರಿ ತಮ್ಮ ಜನ್ಮದಿನವನ್ನು ಗಲ್ಫ್‌ ರಾಷ್ಟ್ರವಾದ ಒಮನ್ ಸಲಾಲಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಇದೀಗ ಸಿನಿಮಾ ರಂಗದಲ್ಲಿ ಹೆಚ್ಚು ಬೇಡಿಕೆ ಇರುವ ನಟಿಯಾಗಿದ್ದಾರೆ. ವಿದೇಶ ಸುತ್ತುವ ರಶ್ಮಿಕಾ ಇದೀಗ ಸಲಾಲಾ ಬೀಚ್‌ ಬಳಿ ಕುಳಿತು ಮನಸ್ಸಿಗೆ ಇಷ್ಟವಾಗುವ ಖಾದ್ಯಗಳನ್ನು ಸವಿಯುತ್ತಾ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಒಮನ್ ಪ್ರವಾಸ ಮಾಡುತ್ತಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.  ರಶ್ಮಿಕಾ ಜೊತೆ ವಿಜಯ್‌ ದೇವರಕೊಂಡ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ರಶ್ಮಿಕಾ ರಿವೀಲ್ ಮಾಡಿಲ್ಲ. ಆದರೂ ಕೂಡ ಕಾಮೆಂಟ್ ಬಾಕ್ಸ್‌ನಲ್ಲಿ ಜನ ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ.

error: Content is protected !!