ಬೈಕ್-ಬೊಲೆರೋ ಅಪಘಾತ: ಸವಾರ ಮೃತ್ಯು

ಕಲ್ಬುರ್ಗಿ: ಬೈಕ್- ಬೊಲೆರೊ ಮಧ್ಯೆ ಅಪಘಾತ ನಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಮಲಾಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಮೀಪ‌ ನಡೆದಿದೆ. ಮೃತನನ್ನು ಬಾಚನಾಳ ಸುಳಗುತ್ತಿ ತಾಂಡಾದ ನಿವಾಸಿ ರಾಜು ಮೋನು ಚೌವಾಣ (38) ಎಂದು ಗುರುತಿಸಲಾಗಿದೆ.

ಕಮಲಾಪುರದ ಕಡೆ ತೆರಳುತ್ತಿದ್ದ ಬೊಲೆರೊ ವಾಹನದ ಟೈರ್ ಸ್ಪೋಟವಾಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಪರಿಣಾಮ ಬೈಕ್ ಸವಾರ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!