ಎ.5 ರಿಂದ 6ರವರೆಗೆ ಸುರತ್ಕಲ್ ಸ್ಪೋರ್ಟ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ಹಿರಿಯರ ಕ್ರಿಕೆಟ್ ಹಬ್ಬ…!

ಮಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಸುರತ್ಕಲ್ ಸ್ಪೋಟ್ಸ್೯ ಆ್ಯಂಡ್ ಕಲ್ಚರಲ್ ಕ್ಲಬ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಹಿರಿಯರ ಕ್ರಿಕೆಟ್ ಹಬ್ಬವನ್ನು ನಡೆಸಿಕೊಂಡು ಬಂದಿದ್ದು, ಅದರಂತೆಯೆ ಏಪ್ರಿಲ್ 5 ರಿಂದ 6 ರ ವರೆಗೆ ರಾಜ್ಯಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ತಂಡಗಳ ಓವರ್ ಆರ್ಮ್ ಪಂದ್ಯಾ ಕೂಟ ಸುರತ್ಕಲ್ ಗೋವಿಮದದಾಸ ಕಾಲೇಜ್ ಮೈದಾನಲ್ಲಿ ನಡೆಯಲಿದೆ. ಈ ಕೂಟದಲ್ಲಿ 14 ತಂಡಗಳು ಭಾಗವಹಿಸಲಿದೆ ಎಂದು ಸುರತ್ಕಲ್ ಸ್ಪೋಟ್ಸ್೯ ಸಂಸ್ಥೆಯ ಕಾರ್ಯದರ್ಶಿ ಕಿರಣ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
5 ಓವರ್‌ ನ ಪಂದ್ಯಾಟ ಇದಾಗಿದ್ದು ಈ ಪಂದ್ಯಾಟದ ವಿಜೆತರಿಗೆ ಪ್ರಥಮ ಬಹುಮಾನ ಟ್ರೋಫಿ ಹಾಗೂ 1 ಲಕ್ಷ ನಗದು, ದ್ವೀತಿಯ ಬಹುಮಾನ ಟ್ರೋಫಿ ಹಾಗೂ 50000 ನಗದು,ತೃತೀಯ ಮತ್ತು ಚತುರ್ಥ ಬಹುಮಾನ ಟ್ರೋಫಿ ಹಾಗೂ ನಗದನ್ನು ನಿಗದಿಪಡಿಸಲಾಗಿದೆ.
ಎ. 5 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯುವ ಈ ಪಂದ್ಯಾಟದ ಅಧ್ಯಕ್ಷತೆಯನ್ನು ಕರಾವಳಿ ಕಾಲೇಜ್ ನ ಸಂಸ್ಥಾಪಕ ಎಸ್.ಗಣೇಶ್ ರಾವ್, ದ್ವೀಪ ಪ್ರಜ್ವಲನೆಯನ್ನು ವೇದಮೂರ್ತಿ ಬಿ.ರಮಾನಂದ ಭಟ್, ಹಾಗೂ ಪಂದ್ಯಾಟದ ಉಧ್ಘಾಟನೆ ಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಶಾಸಕ ಡಾ.ವೈ ಭರತ್ ಶೆಟ್ಟಿಯವರು ನಡೆಸಲಿದ್ದಾರೆ.
ಈ ಪಂದ್ಯಾವಳಿಯ ಸಮಾರೋಪ ಸಮಾರಂಭ ಏಪ್ರಿಲ್ 6 ರಂದು ಅದಿತ್ಯವಾರ ಸಂಜೆ 5 ಗಂಟೆಗೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್,ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಮುಲ್ಕಿ ಮೂಡಬಿದರೆ ಶಾಸಕ ಉಮನಾಥ ಕೋಟ್ಯಾನ್, ಕೃಷ್ಣ .ಜೆ.ಪಾಲೆಮಾರ್,ಹಾಗೂ ಇನಾಯತ್ ಆಲಿ ಹಾಗೂ ಇನ್ನಿತರರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಸಂಚಾಲಕ ಮನೋಹರ ಶೆಟ್ಟಿ ಸೂರಿಂಜೆ, ಉದ್ಯಮಿ ಅನೀಲ್ ಶೆಟ್ಟಿ ತೇವು ಸೂರಿಂಜೆ, ,ಸುರೇಂದ್ರ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮಧ್ಯ, ಕಿರಣ್ ಆಚಾರ್ಯ ಉಪಸ್ಥಿತರಿದ್ದರು.

error: Content is protected !!