ಪ್ರೀತಿ, ಪ್ರೇಮ, ಪ್ರಣಯ… ಮದುವೆಗೆ ಹಿಂದೇಟು… ಹುಟ್ಟಿದ ಹೆಣ್ಣುಮಗುವನ್ನು ಕಾಡಿಗೆಸೆದಿದ್ದ ಪಾಪಿ ಅಪ್ಪ ಕೊನೆಗೂ ಪೊಲೀಸ್‌ ಬಲೆಗೆ!

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮದ ಕಾಡಿನಲ್ಲಿ 3 ತಿಂಗಳ ಹೆಣ್ಣು ಮಗುವನ್ನು ಕಾಡಿಗೆಸೆದು ಬಂದಿದ್ದ ಪಾಪಿ ಅಪ್ಪನನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯ ನಿವಾಸಿ ಧರ್ಮಸ್ಥಳದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಯುವಕ ಮತ್ತು ಧರ್ಮಸ್ಥಳ ಗ್ರಾಮದ ಕೊಲಂಗಾಜೆಯ ಯುವತಿ ಮಗುವಿನ ತಂದೆ-ತಾಯಿ ಎನ್ನುವುದು ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ,

ಇವರಿಬ್ಬರೂ ಸುಮಾರು ಸಮಯದಿಂದ ಪ್ರೀತಿಸುತ್ತಿದ್ದು ಇದರ ಪರಿಣಾಮ ಯುವತಿ ಗರ್ಭಿಣಿಯಾಗಿದ್ದಳು. ಇತ್ತೀಚೆಗೆ ಸಹಜ ಹೆರಿಗೆ ಆಗಿದ್ದು, ಆರೋಪಿ ಮದುವೆಯಾಗಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಹೆರಿಗೆಯ ಕೆಲ ದಿನಗಳ ಬಳಿಕ ಆತನ ಮನೆಗೆ ಹೋಗಿ ಮಗುವನ್ನು ನೀಡಿದ್ದಳು ಎನ್ನಲಾಗಿದೆ. ಮಾ.22ರಂದು ಬೆಳಗ್ಗೆ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದ.

ಬೆಳಾಲಿನ ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವನ್ನು ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿದ್ದರು, ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಮಗುವಿನ ಪಾಪಿ ಅಪ್ಪ ಹಾಗೂ ಅಮ್ಮ ಪೊಲೀಸ್‌ ಬಲೆಗೆ ಬಿದ್ದಿದ್ದು ಇದೇ ವಾರದಲ್ಲಿ ಇಬ್ಬರಿಗೂ ಮದುವೆ ಎಂದು ಹೇಳಲಾಗುತ್ತಿದೆ.

error: Content is protected !!