ಬಜ್ಪೆ: ಅಡ್ಡೂರಿನಲ್ಲಿ ಅಕ್ರಮ ಮರಳು ಸಾಗಣೆ ವಾಹನವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಗಿರೀಶ್ ಮೋಹನ್ ಎಸ್.ಎನ್. ಅವರ ದೂರಿನ ಮೇರೆಗೆ ಬಜ್ಪೆ ಪೋಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಸುಮಾರು 8 ಲಕ್ಷ ಮೌಲ್ಯದ ಲಾರಿ, 17 ಮೆಟ್ರಿಕ್ ಟನ್ ಮರಳು, ಸುಮಾರು 15000 ರೂಪಾಯಿ ಮೌಲ್ಯದ ಮರಳು ಬಜ್ಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.