ಮಾವಿನ ಮಿಡಿ ಕೊಯ್ಯತ್ತಿದ್ದ ವ್ಯಕ್ತಿ ಕೊಂಬೆ ಮುರಿದು ಸಾ*ವು

ಸುಳ್ಯ : ಮಾವಿನ ಮರ ಏರಿ ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದ ವೇಳೆ ಕೊಂಬೆ ತುಂಡಾಗಿ ಬಿದ್ದು ವ್ಯಕ್ತಿಯೊಬ್ಬರು ಮೃ*ತ ಪಟ್ಟ ಘಟನೆ ಸುಳ್ಯ ತಾಲೂಕಿನ ಉಬರಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿ ಮೃ*ತ ದುರ್ದೈವಿ.

ಇವರು ಮಾರ್ಚ್ 22 ರಂದು ಮಾವಿನ ಮರದಿಂದ ಮಾವಿನ ಮಿಡಿ ಕೊಯ್ಯುತ್ತಿದ್ದ ವೇಳೆ ಕೊಂಬೆ ತುಂಡಾ

ಗಿದೆ. ಪರಿಣಾಮ ಕೊಂಬೆಯ ಸಹಿತ ಮರದಿಂದ ಕೆಳಗೆ ಬಿ*ದ್ದ ಅವರಿಗೆ ಗಂಭೀ*ರ ಗಾಯಗಳಾಗಿತ್ತು.
ಸೊಂಟ ಹಾಗೂ ತಲೆಗೆ ಏಟಾಗಿದ್ದ ಅವರನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಜನಾರ್ದನ ಪೂಜಾರಿ ಮೃ*ತಪಟ್ಟಿದ್ದಾರೆ.

error: Content is protected !!