ನವದೆಹಲಿ: ದುಬೈ ಕ್ರೌನ್ ಪ್ರಿನ್ಸ್ ಶೇಖ್ ಇಮ್ದಾನ್ ಬಿನ್ ಮೊಹಮ್ಮದ್ ಅವರು ತಮ್ಮ ಕುಟುಂಬಕ್ಕೆ ನಾಲ್ಕನೇ ಮಗು ಆಗಮನವಾಗಿದೆ. ಈ ಬಾರಿ ಶೇಖ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 2021ರಲ್ಲಿ ಅವಳಿ ರಾಶಿದ್ ಮತ್ತು ಶಾಹಿಖಾ, 2023ರಲ್ಲಿ ಮಗ ಜನಿಸಿದ್ದರು.
ಶೇಖ್ ತಮ್ಮ ನಾಲ್ಕನೇ ಮಗುವಿಗೆ ‘ಹಿಂದ್’ ಎಂದು ಹೆಸರಿಟಿದ್ದಾರೆ. ಮಗಳ ಪೂರ್ಣ ಹೆಸರು ಹಿಂದ್ ಬಿನ್ ಇಮ್ದಾದ್ ಬಿನ್ ಮೊಹಮ್ಮದ್ ಆಗಿದೆ.
ಅರೇಬಿಯಾದ ಪ್ರಕಾರ ʻಹಿಂದ್ʼ ಪದದ ಅರ್ಥ ಶಕ್ತಿ, ಸ್ಮೃತಿ ಮತ್ತು ಪರಂಪರೆ ಎಂದರ್ಥ. ಪ್ರಾಚೀನ ಕಾಲದಿಂದಲೂ ಹಿಂದ್ ಎಂಬ ಪದವನ್ನು ಸಮೃದ್ಧಿ ಮತ್ತು ಹಣದ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಹಿಂದ್ ಹೆಸರಿಡೋದು ಒಬ್ಬ ವ್ಯಕ್ತಿಗೆ ದೃಢತೆ, ಸಹಿಷ್ಣುತೆ ಮತ್ತು ಸಮೃದ್ಧಿಯಂತಹ ಗುಣಗಳನ್ನು ನೀಡುವ ಒಂದು ಮಾರ್ಗವಾಗಿತ್ತು.
ಇಸ್ಲಾಮಿಕ್ ಪೂರ್ವ ಅರೇಬಿಯಾದಲ್ಲಿ ಹಿಂದ್ ಎಂಬ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ಇಸ್ಲಾಂ ಉಗಮದ ಬಳಿಕವೂ ಈ ಹಿಂದ್ ಪದದ ಬಳಕೆ ಮುಂದುವರಿದಿದೆ. ಹಿಂದ್ ಬಿಂಟ್ ಉತ್ಬಾ ಎಂಬವರು ಇಸ್ಲಾಮಿಕ್ ಇತಿಹಾಸದಲ್ಲಿ ಪ್ರಭಾವಶಾಲಿ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಹಿಂದ್ ಬಿನ್ ಉತ್ಬಾ ತಮ್ಮ ಬುದ್ಧಿವಂತಿಕೆ, ನಾಯಕತ್ವದ ಸಾಮರ್ಥ್ಯಗಳು ಮತ್ತು ನಂತರ ಇಸ್ಲಾಂಗೆ ಮತಾಂತರಗೊಂಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಇಂದಿಗೂ ಅರಬ್ ದೇಶಗಳಲ್ಲಿ ಹಿಂದ್ ಎಂಬ ಹೆಸರು ಬಹಳ ಜನಪ್ರಿಯವಾಗಿರುವ ಹಿಂದ್, ಅರ್ಥಪೂರ್ಣ ಮತ್ತು ಪ್ರತಿಷ್ಠಿತ ಹೆಸರಾಗಿ ಉಳಿದಿದೆ.
ಹಾಗಾಗಿಯೇ ದುಬೈ ರಾಜ ಶೇಖ್ ಇಮ್ದಾನ್ ಬಿನ್ ಮೊಹಮ್ಮದ್ ತಮ್ಮ ಮಗಳಿಗೆ ಹಿಂದ್ ಎಂದು ಹೆಸರಿಟ್ಟಿದ್ದಾರೆ.