ಮಾನವಿಯತೆ ಮೆರೆಯುವ ಪವಿತ್ರ ರಂಜಾನ್‌: ಉಪವಾಸದ ಹಿಂದಿನ ಸತ್ಯ ಏನು?

ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಬೆಳಗ್ಗೆ 5.20ರೊಳಗೆ ಆಹಾರ ಸೇವನೆ ಮುಗಿಸಿ ನಂತರ ಧಾರ್ಮಿಕ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಂತರ ಉಪವಾಸ ಆರಂಭವಾದರೆ ಸಂಜೆ 6.30ಕ್ಕೆ ಸೂರ್ಯಾಸ್ತ ನಂತರ ಮುಕ್ತಾಯವಾಗುತ್ತದೆ. ಸೂರ್ಯಾಸ್ತ ನಂತರ ಮತ್ತೆ ಧಾರ್ಮಿಕ ಪೂಜೆ ನಡೆಸಿ ಆಹಾರ ಸೇವನೆ ಇರುತ್ತದೆ. ಇಫ್ತಿಯಾರ್ ಕೂಟಗಳನ್ನು ರಾಜಕೀಯ ನಾಯಕರು, ಗಣ್ಯರು ಈ ತಿಂಗಳು ಆಯೋಜಿಸುತ್ತಿರುತ್ತಾರೆ. ರಾತ್ರಿ ವೇಳೆಯಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಾರೆ. ಇದಕ್ಕೆ ಮುಸಲ್ಮಾನರು ರೋಜಾ ಎಂದು ಕರೆಯುತ್ತಾರೆ. ರಂಜಾನ್‌ ಮಾಸದಲ್ಲಿ ಮುಸ್ಲಿಂ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಪಾಪಗಳಿಂದ ಮೋಕ್ಷ ಸಿಗುವುದು, ಅಲ್ಲಾನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆಯಿದೆ.

ರಂಜಾನ್ ಹಬ್ಬದ ಸಂಪ್ರದಾಯದಂತೆ ಮುಸ್ಲಿಮರು ಒಂದು ತಿಂಗಳ ಕಾಲ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಉಪವಾಸ ವೃತ ಆಚರಿಸುತ್ತಾರೆ. ಉಪವಾಸ (ರೋಜಾ) ಮಾತ್ರವಲ್ಲದೇ ದಾನ ( ಝಕಾತ್) ನಮಾಜ್, ಕುರಾನ್ ಪಠನ, ತರಾವೀಹ್ ಮಾಡುವ ಮೂಲಕ ಅಲ್ಲಾಹ್ ನನ್ನು ಸ್ಮೃತಿಸಲಾಗುತ್ತದೆ.

ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಆತ್ಮಸ್ಥೈರ್ಯ ಹೆಚ್ಚಿಸಲು, ಹಸಿವಿನ ಮಹತ್ವ ಮತ್ತು ಅದೃಷ್ಟ ಸಂಪಾದನೆ ಮಾಡಲು ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ. ತಿಂಗಳ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ. ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನ-ಧರ್ಮದಲ್ಲಿ ತೊಡಗುವುದು ಮಾತ್ರವಲ್ಲದೇ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ.

ಸೂರ್ಯೋದಯದಕ್ಕಿಂತ ಮುಂಚೆ ಕುಟುಂಬ ಸದಸ್ಯರೊಂದಿಗೆ ಸೇವಿಸುವ ಆಹಾರ ವೇಳೆ ( ಸಹಿರಿ) ಹಾಗೂ ಸೂರ್ಯಾಸ್ತದ ವೇಳೆ ಉಪವಾಸ ಮುರಿಯುವ ವೇಳೆ (ಇಫ್ತಾರ್) ಉಪವಾಸದ ಪ್ರಮುಖ ಸಮಯ ಈಫ್ತಿಯಾರ್ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿಗಳಲ್ಲಿ, ಕೆಲವರು ಮನೆಗಳಲ್ಲಿ ಸೇರಿ ಖರ್ಜೂರ, ಬಾಳೆ ಹಣ್ಣು, ಕಲ್ಲಂಗಡಿ ಸೇರಿದಂತೆ ಎಲ್ಲಾ ಬಗೆಯ ಹಣ್ಣು- ಹಂಪಲು ತಂದು ಒಂದೆಡೆ ಸೇರಿಸಿ ಸಾಮೂಹಿಕವಾಗಿ ಸೇವಿಸುವ ಮೂಲಕ ಉಪವಾಸ ವೃತ ಮುಗಿಸುತ್ತಾರೆ. ಆ ಮೂಲಕ ಬಡವ, ಶ್ರೀಮಂತ ಉನ್ನತ, ಕನಿಷ್ಟ ಎಂಬ ಬೇಧಬಾವ ಮರೆತು ಮಾನವಿಯತೆ ಮೆರೆಯುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.
ರಂಜಾನ್ ನ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ಕುರಾನ್ ಮೂಲಕ ನೆನಪಿಸಿಕೊಳ್ಳುವುದು ಎಂಬ ನಂಬಿಕೆ ಇದೆ. ಈ ಅವಧಿಯಲ್ಲಿ ಮುಸ್ಲಿಮರು ಮಸೀದಿಯಲ್ಲೇ ತಂಗುವುದು ಅಥವಾ ಮಲಗುತ್ತಾರೆ. ಈ ಮೂಲಕ ಧಾರ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

error: Content is protected !!