ಒಟ್ಟೊಟ್ಟಿಗೆ ಬರುತ್ತಿದೆ ಈದ್ ಉಲ್ ಫಿತ್ರ್-‌ ಯುಗಾದಿ!

ಮಂಗಳೂರು: ಈ ವಾರಾಂತ್ಯದಲ್ಲಿ ಯುಗಾದಿ ಮತ್ತು ಈದ್ ಉಲ್ ಫಿತ್ರ್ ಹಬ್ಬಗಳು ಒಟ್ಟೊಟ್ಟಿಗೆ ಬರುತ್ತಿರುವುದರಿಂದ ಇಡೀ ದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಏರಡು ಧರ್ಮಗಳ ಹಬ್ಬಗಳು ಹೀಗೆ ಒಂದೇ ದಿನ ಬರುತ್ತಿರುವುದು ಬಹಳ ಅಪರೂಪ. ಹೀಗಾಗಿ ಎರಡೂ ಧರ್ಮದ ಜನರು ಹಬ್ಬ ಆಚರಿಸಿ ಸಂಭ್ರಮ ಪಡೆಯಲಿದ್ದಾರೆ.


ಯುಗಾದಿ ಹಬ್ಬದಂದು ಹಿಂದೂಗಳು ಎಳ್ಳು, ಬೆಲ್ಲ ಹಂಚಿ ಸಂಭ್ರಮ ಪಡುತ್ತಾರೆ. ಅನ್ಯ ಧಮದವರೂ ಇದನ್ನು ಖುಷಿಯಿಂದ ಸ್ವೀಕರಿಸಿ ಹಿಂದೂಗಳ ಸಂತೋಷದಲ್ಲಿ ಪಾಲ್ಗೊಳ್ಳುತ್ತಾರೆ. ಅದೇ ರೀತಿ ರಂಜಾನ್ ಮಾಸ ಮುಗಿದು ಈದ್‌ ಹಬ್ಬದಂದು ಮುಸ್ಲಿಮರು ಅನ್ಯರಿಗೆ ಸಿಹಿ ತಿಂಡಿಗಳನ್ನು ಹಂಚುತ್ತಾರೆ. ಅನ್ಯಧರ್ಮದವರನ್ನು ಮನೆಗೆ ಕರೆಸಿ ಬಿರಿಯಾನಿ ಬಡಿಸುತ್ತಾರೆ. ಈ ಬಾರಿ ಎರಡೂ ಹಬ್ಬಗಳೂ ಒಂದೇ ದಿನ ಬಂದಿದ್ದು, ಹಿಂದೂ ಮುಸ್ಲಿಮರ ಸಾಮರಸ್ಯಕ್ಕೆ ಭದ್ರ ಬುನಾದಿ ಹಾಕಲಿದೆ.
ಮಾರ್ಚ್- 29 ಯುಗಾದಿ ಹಬ್ಬದ ಅಮಾವಾಸ್ಯೆ ಇರುತ್ತದೆ. ಭಾನುವಾರ ಚಾಂದ್ರಮಾನ ಯುಗಾದಿ ಹಬ್ಬ ಇರಲಿದೆ. ಮುಸ್ಲಿಮರ ಒಂದು ತಿಂಗಳ ರಂಜಾನ್ ಉಪವಾಸ ವ್ರತದ ಲೆಕ್ಕ ಹಾಕಿದರೆ ಸೋಮವಾರ ಹಬ್ಬದ ದಿನ ಆಗುತ್ತದೆ, ಆದರೆ ಶನಿವಾರ ಚಂದ್ರದರ್ಶನವಾದರೆ ಭಾನುವಾರವೇ ಈದ್‌ ಹಬ್ಬ ನಡೆಯಲಿದೆ. ಈ ಸಾಧ್ಯತೆ ತೀರಾ ಹೆಚ್ಚಿದ್ದು, ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

error: Content is protected !!