ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ 155ನೇ ಅಧಿವೇಶನದ 13ನೇ ದಿನವಾದ ಇಂದು ವಿಧಾನ ಪರಿಷತ್ ಸದನದಲ್ಲಿ ಮತ್ತೊಮ್ಮೆ ಸಭಾಪತಿಗಳಾಗಿ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಬಜೆಟ್ ಮೇಲಿನ ಚರ್ಚೆಯನ್ನು ಸುಗಮವಾಗಿ ನಡೆಸಿಕೊಡುವ ಮೂಲಕ ಸೈ ಅನ್ನಿಸಿಕೊಂಡರು.
ಆಡಳಿತ ಮತ್ತು ವಿಪಕ್ಷಗಳ ನಡುವಿನ ಚರ್ಚೆಯು ಎಂತಹ ವಿಷಮ ಪರಿಸ್ಥಿತಿಗೆ ಹೋದರೂ ಸಹ ವಿಚಲಿತರಾಗದೆ ಸಂಯಮದಿಂದ ಎಲ್ಲರನ್ನು ತಮ್ಮ ಮಾತಿನ ಚಾಕಚಕ್ಯತೆಯಿಂದ ಪರಿಸ್ಥಿತಿ ತಿಳಿಗೊಳಿಸುತ್ತಾ ಚರ್ಚೆಗೆ ಅವಕಾಶ ಮಾಡಿಕೊಟ್ಟರು.